ಡ್ರಗ್ಸ್‌ ಉಗ್ರವಾದದ ಆರೋಪದಲ್ಲಿ ಅಮೆರಿಕದ ಬಂಧನದಲ್ಲಿರುವ ವೆನಿಜುವೆಲಾ ಅಧ್ಯಕ್ಷ ನಿಕೋಲಸ್‌ ಮಡುರೋ ಮತ್ತು ಅವರ ಪತ್ನಿ ಸೀಲಿಯಾ ಫ್ಲೋರ್ಸ್‌ ಅವರು ಸೋಮವಾರ ಮೊದಲ ಬಾರಿ ಅಮೆರಿಕದ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿದರು.  

ನ್ಯೂಯಾರ್ಕ್: ಡ್ರಗ್ಸ್‌ ಉಗ್ರವಾದದ ಆರೋಪದಲ್ಲಿ ಅಮೆರಿಕದ ಬಂಧನದಲ್ಲಿರುವ ವೆನಿಜುವೆಲಾ ಅಧ್ಯಕ್ಷ ನಿಕೋಲಸ್‌ ಮಡುರೋ ಮತ್ತು ಅವರ ಪತ್ನಿ ಸೀಲಿಯಾ ಫ್ಲೋರ್ಸ್‌ ಅವರು ಸೋಮವಾರ ಮೊದಲ ಬಾರಿ ಅಮೆರಿಕದ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿದರು. ಈ ವೇಳೆ ಇಬ್ಬರೂ ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಜತೆಗೆ ಮಡುರೋ, ‘ನಾನು ಸಭ್ಯ. ನಾನಿನ್ನೂ ವೆನಿಜುವೆಲಾದ ಅಧ್ಯಕ್ಷ. ನನ್ನನ್ನು ಅಪಹರಿಸಲಾಗಿದೆ’ ಎಂದಿದ್ದಾರೆ.

ದಂಪತಿಯ ಕೈಗೆ ಕೋಳ

ದಂಪತಿಯ ಕೈಗೆ ಕೋಳ ತೊಡಿಸಿ, ಪೊಲೀಸರು ಹೆಲಿಕಾಪ್ಟರ್‌ನಿಂದ ಕರೆದೊಯ್ಯುತ್ತಿರುವ ವಿಡಿಯೋ ಲಭ್ಯವಾಗಿದೆ. ಇದರಲ್ಲಿ ಇಬ್ಬರು ಕುಂಟುತ್ತಾ ನಡೆಯುತ್ತಿರುವುದನ್ನು ಕಾಣಬಹುದು.

ವ್ಯಾಪಕ ಡ್ರಗ್ಸ್‌, ಶಸ್ತ್ರಾಸ್ತ್ರ ದಂಧೆ

ವ್ಯಾಪಕ ಡ್ರಗ್ಸ್‌, ಶಸ್ತ್ರಾಸ್ತ್ರ ದಂಧೆ ನಡೆಸಿ ಅಮೆರಿಕಕ್ಕೂ ಮಾದಕವಸ್ತುವನ್ನು ಪೂರೈಸುತ್ತಿದ್ದ ಆರೋಪ ಹೊರಿಸಿ ಜ.3ರಂದು ಅಮೆರಿಕದ ಡೆಲ್ಟಾ ಫೋರ್ಸ್‌ ರಾತೋರಾತ್ರಿ ಮಡುರೋ ನಿವಾಸಕ್ಕೆ ನುಗ್ಗಿ ದಂಪತಿಯನ್ನು ಬಂಧಿಸಿ ಕರೆತಂದು, ನ್ಯೂಯಾರ್ಕ್‌ನ ಬ್ರೂಕ್ಲಿನ್‌ ಜೈಲಿನಲ್ಲಿಟ್ಟಿತ್ತು.