ಸಾರಾಂಶ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ ಮತ್ತು ಅಜಿತ್ ಪವಾರ್ ಬಣದ ಎನ್‌ಸಿಪಿಯ ಅಭೂತಪೂರ್ವ ಸಾಧನೆ, 15ನೇ ವಿಧಾನಸಭೆಯಲ್ಲಿ ಯಾವುದೇ ವಿಪಕ್ಷಕ್ಕೆ ಅಧಿಕೃತ ವಿಪಕ್ಷ ಮತ್ತು ಅಧಿಕೃತ ವಿಪಕ್ಷ ನಾಯಕನ ಸ್ಥಾನಮಾನವನ್ನೇ ತಪ್ಪಿಸಿದೆ.
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ ಮತ್ತು ಅಜಿತ್ ಪವಾರ್ ಬಣದ ಎನ್‌ಸಿಪಿಯ ಅಭೂತಪೂರ್ವ ಸಾಧನೆ, 15ನೇ ವಿಧಾನಸಭೆಯಲ್ಲಿ ಯಾವುದೇ ವಿಪಕ್ಷಕ್ಕೆ ಅಧಿಕೃತ ವಿಪಕ್ಷ ಮತ್ತು ಅಧಿಕೃತ ವಿಪಕ್ಷ ನಾಯಕನ ಸ್ಥಾನಮಾನವನ್ನೇ ತಪ್ಪಿಸಿದೆ.
ನಿಯಮಗಳ ಅನ್ವಯ ವಿಧಾನಸಭೆಯ ಒಟ್ಟು ಬಲದ ಕನಿಷ್ಠ ಶೇ.10ರಷ್ಟು ಸ್ಥಾನ ಪಡೆದರೆ ಮಾತ್ರ ಆ ಪಕ್ಷಕ್ಕೆ ಅಧಿಕೃತ ವಿಪಕ್ಷ ಸ್ಥಾನ ಮತ್ತು ಅದರ ನಾಯಕನಿಗೆ ಅಧಿಕೃತ ವಿಪಕ್ಷ ನಾಯಕ ಸ್ಥಾನಮಾನ ಸಿಗುತ್ತದೆ. ಅಧಿಕೃತ ವಿಪಕ್ಷ ನಾಯಕ ಸಂಪುಟ ದರ್ಜೆ ಸ್ಥಾನಮಾನ ಹೊಂದಿರುತ್ತಾರೆ. ಈ ಸ್ಥಾನಮಾನ ಪಡೆಯಲು ಪಕ್ಷವೊಂದು 29 ಸ್ಥಾನ ಪಡೆಯಬೇಕು.ಆದರೆ ಪ್ರಸಕ್ತ ಚುನಾವಣೆಯಲ್ಲಿ ವಿಪಕ್ಷಗಳ ಪೈಕಿ ಶಿವಸೇನೆ ಗರಿಷ್ಠ 21 ಸ್ಥಾನ ಗೆದ್ದಿದೆ. ಅಘಾಡಿ ಕೂಟದ ಕಾಂಗ್ರೆಸ್, ಶರದ್ ಪವಾರ್ ಬಣದ ಸಾಧನೆ ಇದಕ್ಕಿಂತಲೂ ಕಡಿಮೆ ಇದೆ. ಹೀಗಾಗಿ ವಿಪಕ್ಷಗಳಿಗೆ ಈ ಬಾರಿ ಸ್ಥಾನಮಾನ ತಪ್ಪುವುದು ಖಚಿತವಾಗಿದೆ. 1960ರಲ್ಲಿ ಮಹಾರಾಷ್ಟ್ರ ವಿಧಾನಸಭೆ ರಚನೆಯಾದ ಬಳಿಕ ಅದು ಅಧಿಕೃತ ವಿಪಕ್ಷ ನಾಯಕನ ಹೊಂದದೇ ಇರುವುದು ಇದೇ ಮೊದಲು.