ಸಾರಾಂಶ
ಮುಂಬೈ: ಮಹಾರಾಷ್ಟ್ರ ಸರ್ಕಾರ ದೇಸಿ ಗೋವುಗಳನ್ನು ‘ರಾಜ್ಯಮಾತೆ’ ಘೋಷಿಸಿದೆ. ವೇದಗಳ ಕಾಲದಿಂದಲೂ ದೇಸಿ ಗೋವುಗಳಿಗಿರುವ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ಆದೇಶವನ್ನು ಪ್ರಕಟಿಸಿದ್ದು, ಈ ಹಸುಗಳಿಗೆ ಆಹಾರವನ್ನೂ ರಾಜ್ಯ ಸರ್ಕಾರ ಒದಗಿಸಲಿದೆ. ಜೊತೆಗೆ ಗೋಶಾಲೆಗಳಿಗೆ ಪ್ರತಿ ಹಸುಗಳಿಗೆ ನಿತ್ಯ 50 ರು. ನೆರವು ನೀಡುವ ಪ್ರಸ್ತಾಪಕ್ಕೂ ಸಮ್ಮತಿ ಸಿಕ್ಕಿದೆ.
ಈ ಕುರಿತು ಮಾತನಾಡಿದ ಮಹಾರಾಷ್ಟ್ರ ಡಿಸಿಎಂ ದೇವೆಂದ್ರ ಫಡ್ನವೀಸ್ ,ದೇಸಿ ಗೋವುಗಳ ಸಂಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ. ದೇಶಿ ಹಸುಗಳನ್ನು ಸಾಕಲು ರೈತರಿಗೆ ಸರ್ಕಾರದಿಂದ ಆಹಾರವನ್ನು ನೀಡಲಾಗುತ್ತದೆ’ ಎಂದರು.
ಇನ್ನು ರಾಜ್ಯ ಸರ್ಕಾರ ಗೋಶಾಲೆಗಳನ್ನು ನಡೆಸುವವರಿಗೆ ಪ್ರತಿ ಹಸುವಿಗೆ ನಿತ್ಯ 50 ರು. ಆರ್ಥಿಕ ನೆರವನ್ನು ನೀಡಬೇಕು ಎನ್ನುವ ಪ್ರಸ್ತಾಪಕ್ಕೂ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ದೊರೆತಿದೆ.
ದೇಸಿ ಗೋವುಗಳಿಂದ ಪುರಾಣಗಳ ಮಹತ್ವ ಮಾತ್ರವಲ್ಲದೇ ದನದ ಹಾಲಿನಿಂದ ಪೌಷ್ಠಿಕಾಂಶ, ಆಯುರ್ವೇದ, ಪಂಚಗವ್ಯ ಚಿಕಿತ್ಸೆ, ಸಾವಯುವ ಕೃಷಿಯಲ್ಲಿ ಹಸುವಿನ ಗೊಬ್ಬರ ಬಳಕೆ.. ಹೀಗೆ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಈ ಆದೇಶವನ್ನು ಜಾರಿಗೆ ತರಲಾಗಿದೆ ಎಂದು ಮಹಾರಾಷ್ಟ್ರದ ಕೃಷಿ, ಹೈನುಗಾರಿಕೆ ಅಭಿವೃದ್ಧಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಮಾಹಿತಿ ನೀಡಿದೆ.