ಸಾರಾಂಶ
ಮಹಾರಾಷ್ಟ್ರದಲ್ಲಿ ದಿನಕ್ಕೆ 8 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸಹ ಅಲ್ಲಿನ ಕೃಷಿ ಸಚಿವ ಮಾಣಿಕ್‌ರಾವ್ ಕೊಕಟೆ ಅವರು ವಿಧಾನಸಭೆ ಕಲಾಪದಲ್ಲಿ ಆನ್ಲೈನ್ ರಮ್ಮಿ ಆಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮುಂಬೈ: ಮಹಾರಾಷ್ಟ್ರದಲ್ಲಿ ದಿನಕ್ಕೆ 8 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸಹ ಅಲ್ಲಿನ ಕೃಷಿ ಸಚಿವ ಮಾಣಿಕ್‌ರಾವ್ ಕೊಕಟೆ ಅವರು ವಿಧಾನಸಭೆ ಕಲಾಪದಲ್ಲಿ ಆನ್ಲೈನ್ ರಮ್ಮಿ ಆಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಈ ವಿಡಿಯೋವನ್ನು ಎನ್‌ಸಿಪಿ ಶರದ್ ಪವಾರ್ ಬಣದ ರೋಹಿತ್ ಪವಾರ್ ಹಂಚಿಕೊಂಡಿದ್ದು, ರಾಜ್ಯದಲ್ಲಿ ಪ್ರತಿ ದಿನ 8 ರೈತರು ಸಾಯುತ್ತಿದ್ದರೂ, ನಮ್ಮ ಸಚಿವರಿಗೆ ಕೆಲಸವಿಲ್ಲದೇ ಸದನದಲ್ಲಿ ರಮ್ಮಿ ಆಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ, ‘ಇದು ಅಪರಿಪೂರ್ಣ ವಿಡಿಯೋ. ನಾನು ಯುಟ್ಯೂಬ್‌ನಲ್ಲಿ ಕಲಾಪ ವೀಕ್ಷಿಸಲು ಒತ್ತಿದ್ದೆ, ಆದರೆ ಆಗ ಗೇಮ್ ಡೌನ್‌ಲೋಡ್ ಆಯಿತು. ನನಗೆ ಸ್ಕಿಪ್ ಮಾಡಲು ಬರಲಿಲ್ಲ. ಪೂರ್ತಿ ವಿಡಿಯೋ ನೋಡಿ, ಅದರಲ್ಲಿ ನಾನು ಗೇಮ್ ಆಫ್ ಮಾಡಿದ್ದೆ’ ಎಂದು ತಳ್ಳಿಹಾಕಿದ್ದಾರೆ.
ಕರ್ನಾಟಕದ ರಾಯಚೂರಿನಲ್ಲಿಯೂ ಸಹ ಡಿಎಫ್‌ಓ ಅಧಿಕಾರಿ ಸಭೆ ವೇಳೆ ರಮ್ಮಿ ಆಡಿದ್ದರು.