ಅಮೆರಿಕದಲ್ಲಿ ಹೊಸ ಅಲೆಗೆ ಕಾರಣವಾದ ಕೋವಿಡ್‌ ತಳಿ ಮಹಾರಾಷ್ಟ್ರದಲ್ಲೂ ಪತ್ತೆ

| Published : May 14 2024, 01:08 AM IST / Updated: May 14 2024, 04:43 AM IST

ಅಮೆರಿಕದಲ್ಲಿ ಹೊಸ ಅಲೆಗೆ ಕಾರಣವಾದ ಕೋವಿಡ್‌ ತಳಿ ಮಹಾರಾಷ್ಟ್ರದಲ್ಲೂ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕ, ಆಸ್ಟ್ರೇಲಿಯಾ, ಚಿಲಿ ದೇಶಗಳಲ್ಲಿ ಹೊಸ ಅಲೆಗೆ ಕಾರಣವಾಗಿರುವ ಒಮಿಕ್ರೋನ್‌ ಕೊರೋನಾ ವೈರಸ್‌ನ ಹೊಸ ಉಪತಳಿ ಇದೀಗ ಮಹಾರಾಷ್ಟ್ರದಲ್ಲೂ ಪತ್ತೆಯಾಗಿದೆ.

ಮುಂಬೈ: ಅಮೆರಿಕ, ಆಸ್ಟ್ರೇಲಿಯಾ, ಚಿಲಿ ದೇಶಗಳಲ್ಲಿ ಹೊಸ ಅಲೆಗೆ ಕಾರಣವಾಗಿರುವ ಒಮಿಕ್ರೋನ್‌ ಕೊರೋನಾ ವೈರಸ್‌ನ ಹೊಸ ಉಪತಳಿ ಇದೀಗ ಮಹಾರಾಷ್ಟ್ರದಲ್ಲೂ ಪತ್ತೆಯಾಗಿದೆ.

 ಫ್ಲಿರ್ಟ್‌ ಎಂದು ಹೆಸರಿಸಲಾಗಿರುವ ಈ ಉಪತಳಿಯ 91 ಪ್ರಕರಣಗಳು ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಪತ್ತೆಯಾಗಿದೆ. ಇದು ಈ ಹಿಂದೆ ಪತ್ತೆಯಾಗಿದ್ದ ಜೆ ಎನ್ 1 ತಳಿಯನ್ನು ಮೀರಿಸುವ ಆತಂಕಕ್ಕೆ ಕಾರಣವಾಗಿದೆ. 

ಪುಣೆಯಲ್ಲಿ 51, ಥಾಣೆ 20, ಅಮರಾವತಿ, ಔರಂಗಬಾದ್, ಸೊಲ್ಹಾಪುರದಲ್ಲಿ ತಲಾ 2 ಮತ್ತು ಅಹಮದ್‌ನಗರ, ನಾಸಿಕ್ , ಲಾಥೋರ್, ಸಾಂಗ್ಲಿಯಲ್ಲಿ ತಲಾ ಒಬ್ಬರಲ್ಲಿ ಕೋವಿಡ್ ಸೋಂಕಿನ ಉಪತಳಿ ಪತ್ತೆಯಾಗಿದೆ. ಜನವರಿ ತಿಂಗಳಿನಲ್ಲಿ ಅಮೆರಿಕದಲ್ಲಿ ಒಮ್ರಿಕಾನ್‌ನ ಮೊದಲ ಪ್ರಕರಣ ಪತ್ತೆಯಾಗಿತ್ತು. ಭಾನುವಾರ ಅಮೆರಿಕದಲ್ಲಿ 1125, ಚಿಲಿಯಲ್ಲಿ 1215, ಹಾಂಕ್‌ಕಾಂಗ್‌ನಲ್ಲಿ 696, ಆಸ್ಟ್ರೇಲಿಯಾದಲ್ಲಿ 664 ಪ್ರಕರಣ ದಾಖಲಾಗಿವೆ.