ಬಿಜೆಪಿಯದ್ದು ಕೊಳಕು ಹಿಂದೂ ಧರ್ಮ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿವಾದ

| N/A | Published : Apr 01 2025, 12:45 AM IST / Updated: Apr 01 2025, 04:54 AM IST

ಬಿಜೆಪಿಯದ್ದು ಕೊಳಕು ಹಿಂದೂ ಧರ್ಮ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿವಾದ
Share this Article
  • FB
  • TW
  • Linkdin
  • Email

ಸಾರಾಂಶ

‘ಬಿಜೆಪಿ ಕೊಳಕು ಹಿಂದೂ ಧರ್ಮ ಪಾಲಿಸುತ್ತಿದೆ. ಅವರು ಧರ್ಮಗಳ ನಡುವೆ ವಿಷ ಬೀಜ ಭಿತ್ತುತ್ತಿದ್ದಾರೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.

ಕೋಲ್ಕತಾ: ‘ಬಿಜೆಪಿ ಕೊಳಕು ಹಿಂದೂ ಧರ್ಮ ಪಾಲಿಸುತ್ತಿದೆ. ಅವರು ಧರ್ಮಗಳ ನಡುವೆ ವಿಷ ಬೀಜ ಭಿತ್ತುತ್ತಿದ್ದಾರೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. 

 ರಂಜಾನ್‌ ಅಂಗವಾಗಿ ಕೋಲ್ಕತಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮಮತಾ, ನಾನು ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ಧರ್ಮವನ್ನು ಅನುಸರಿಸುತ್ತಿದ್ದೇನೆ. 

ಆದರೆ ಅವರು (ಬಿಜೆಪಿ) ಕೊಳಕು ಧರ್ಮವನ್ನು ಅನುಸರಿಸುತ್ತಿದ್ದಾರೆ. ಅವರ ಧರ್ಮ ನಿಜವಾದ ಹಿಂದುತ್ವದ ವಿರುದ್ಧವಾಗಿದೆ ಎಂದು ಆರೋಪಿಸಿದರು. ರಾಮ್‌ ಮತ್ತು ಬಾಮ್‌ (ಬಿಜೆಪಿ ಮತ್ತು ಎಡಪಕ್ಷಗಳು) ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಲು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿವೆ. ಆದರೆ ನಾನು ಅವಕಾಶ ನೀಡುವುದಿಲ್ಲ. ನಾನು ಅಲ್ಪಸಂಖ್ಯಾತರ ರಕ್ಷಣೆಗೆ ಬದ್ಧ’ ಎಂದರು.

ಸಿಎಂ ಮಮತಾ ಹೇಳಿಕೆಗೆ ಪ್ರತಿಕ್ರಿಯಸಿದ ಬಂಗಾಳ ಬಿಜೆಪಿ ಅಧ್ಯಕ್ಷ, ವಿಪಕ್ಷ ನಾಯಕ ಸುವೇಂದು ಅಧಿಕಾರಿ, ಕೊಳಕು ಧರ್ಮ ಯಾವುದಿದೆ? ಈ ಹಿಂದೆ ಹಿಂದೂಗಳ ಮೇಲೆ ಮಮತಾ ನಡೆಸಿದ ದಾಳಿಗಳ ಬಗ್ಗೆ ನೆನಪಿಲ್ಲವೇ. ಸಿಎಂ ಮಮತಾ ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.