ಗ್ಯಾಂಗ್‌ರೇ*ಗೆ ವಿದ್ಯಾರ್ಥಿನಿ ಹೊಣೆ ಮಾಡಿದ ಬಂಗಾಳ ಸಿಎಂ ಮಮತಾ

| N/A | Published : Oct 13 2025, 02:01 AM IST

ಗ್ಯಾಂಗ್‌ರೇ*ಗೆ ವಿದ್ಯಾರ್ಥಿನಿ ಹೊಣೆ ಮಾಡಿದ ಬಂಗಾಳ ಸಿಎಂ ಮಮತಾ
Share this Article
  • FB
  • TW
  • Linkdin
  • Email

ಸಾರಾಂಶ

ಒಡಿಶಾ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್‌*ಪ್‌ಗೆ ಆಕೆ ಮತ್ತು ಆಕೆ ಓದುತ್ತಿದ್ದ ಖಾಸಗಿ ವೈದ್ಯಕೀಯ ಕಾಲೇಜನ್ನೇ ಹೊಣೆ ಮಾಡುವ ಮೂಲಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾರೀ ಟೀಕೆಗೆ ತುತ್ತಾಗಿದ್ದಾರೆ.

ಕೋಲ್ಕತಾ: ಒಡಿಶಾ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್‌*ಪ್‌ಗೆ ಆಕೆ ಮತ್ತು ಆಕೆ ಓದುತ್ತಿದ್ದ ಖಾಸಗಿ ವೈದ್ಯಕೀಯ ಕಾಲೇಜನ್ನೇ ಹೊಣೆ ಮಾಡುವ ಮೂಲಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾರೀ ಟೀಕೆಗೆ ತುತ್ತಾಗಿದ್ದಾರೆ.

ಅತ್ಯಾ*ರದ ಘಟನೆ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ ಮಮತಾ,‘ಘಟನೆಯನ್ನು ನಾನು ಖಂಡಿಸುತ್ತೇನೆ. ಇದರಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಆಗುವಂತೆ ಸರ್ಕಾರ ನೋಡಿಕೊಳ್ಳಲಿದೆ. ಆದರೆ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ರಾತ್ರಿ 12.30ಕ್ಕೆ ಹೊರಬರಲು ಹೇಗೆ ಸಾಧ್ಯ? ಶಿಕ್ಷಣ ಸಂಸ್ಥೆಗಳೇ ವಿದ್ಯಾರ್ಥಿಗಳನ್ನು ನೋಡಿಕೊಳ್ಳಬೇಕು.

ಅವರಿಗೆ ರಾತ್ರಿಯ ಸಮಯದಲ್ಲಿ ಹೊರಗೆ ಹೋಗಲು ಬಿಡಬಾರದು. ಪೊಲೀಸರು ಪ್ರತಿ ಮನೆಯ ಮುಂದೆ ನಿಂತು ಪ್ರತಿಯೊಬ್ಬರ ಮೇಲೆ ಕಣ್ಣಿಡಲು ಆಗದು. ವಿದ್ಯಾರ್ಥಿನಿಯರಿಗೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಗೊತ್ತಿರಬೇಕು. ಹೊರರಾಜ್ಯಗಳಿಂದ ಬಂದವರು ಹಾಸ್ಟೆಲ್‌ ನಿಯಮಗಳ್ನು ಅನುಸರಿಸಬೇಕು’ ಎಂದು ಸಲಹೆ ನೀಡಿದ್ದಾರೆ.

ಇದೇ ವೇಳೆ, ‘ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು ಇತರರಿಗಾಗಿ ಶೋಧ ನಡೆಸಲಾಗುತ್ತಿದೆ. ತಪ್ಪಿತಸ್ಥರು ಯಾರನ್ನೂ ಬಿಡುವುದಿಲ್ಲ’ ಎಂದು ಬ್ಯಾನರ್ಜಿ ಭರವಸೆ ನೀಡಿದ್ದಾರೆ. ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಸ್ನೇಹಿತನೊಡನೆ ಶುಕ್ರವಾರ ರಾತ್ರಿ ಊಟಕ್ಕೆ ಕಾಲೇಜು ಹಾಸ್ಟೆಲ್‌ನಿಂದ ಹೊರಗೆ ತೆರಳಿದಾಗ ಸಾಮೂಹಿಕ ಅತ್ಯಾಚಾರಕ್ಕೆ ಈಡಾಗಿದ್ದಳು.

ಆಕೆ ರಾತ್ರಿ 12ಕ್ಕೆ ಹಾಸ್ಟೆಲ್‌ನಿಂದ ಹೊರಬಂದಿದ್ದೇಕೆ

ಪ್ರತಿ ಮನೆಯ ಮುಂದೆ ಪೊಲೀಸರಿಗೆ ನಿಲ್ಲಲಾಗದು

ಸ್ತ್ರೀಯರಿಗೆ ತಮ್ಮನ್ನು ರಕ್ಷಿಸಿಕೊಳ್ಳಲು ಗೊತ್ತಿರಬೇಕು

Read more Articles on