ಕೆಲವು ಜಡ್ಜ್‌ಗಳು ಬಿಜೆಪಿ ಏಜೆಂಟರು: ಮಮತಾ ವಾಗ್ದಾಳಿ

| Published : Mar 11 2024, 01:16 AM IST

ಕೆಲವು ಜಡ್ಜ್‌ಗಳು ಬಿಜೆಪಿ ಏಜೆಂಟರು: ಮಮತಾ ವಾಗ್ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ನಿವೃತ್ತ ನ್ಯಾ ಅಭಿಜಿತ್‌ ಗಂಗೋಪಾಧ್ಯಾಯ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿ ಕಾರಿದ್ದು, ಕೆಲವು ನ್ಯಾಯಾಧೀಶರು ಬಿಜೆಪಿ ಏಜೆಂಟ್‌ ರೀತಿಯಲ್ಲಿ ವರ್ತಿಸುತ್ತಿದ್ದುದಾಗಿ ತಿಳಿಸಿದ್ದಾರೆ.

ಕೋಲ್ಕತ್ತಾ: ‘ನನಗೆ ನ್ಯಾಯಾಂಗದ ಕುರಿತು ಗೌರವವಿದೆ. ಆದರೆ ಕೆಲವು ನ್ಯಾಯಾಧೀಶರು ಬಿಜೆಪಿಯ ಏಜೆಂಟರಂತೆ ಕೆಲಸ ಮಾಡಿದ್ದಾರೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚೆಗೆ ನ್ಯಾಯಾಧೀಶ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಅಭಿಜಿತ್‌ ಗಂಗೋಪಾಧ್ಯಾಯ ಉದ್ದೇಶಿಸಿ ಭಾನುವಾರ ಅವರು ಈ ಹೇಳಿಕೆ ನೀಡಿದ್ದಾರೆ.ಅಭಿಜಿತ್‌ ಗಂಗೋಪಾಧ್ಯಾಯ ಅವರು ಇತ್ತೀಚೆಗಷ್ಟೇ ಟಿಎಂಸಿ ಪಕ್ಷದ ಸವಾಲನ್ನು ಸ್ವೀಕರಿಸಿ ನ್ಯಾಯಾಧೀಶ ಹುದ್ದೆಯನ್ನು ತೊರೆದು ಬಿಜೆಪಿ ಸೇರಿದ್ದರು. ಅವರು ನ್ಯಾಯಾಧೀಶರಾಗಿದ್ದ ವೇಳೆ ಟಿಎಂಸಿಗೆ ಇರುಸುಮುರುಸು ತರುವಂತಹ ಹಲವು ತೀರ್ಪು ನೀಡಿದ್ದುದು ಇಬ್ಬರ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು.