ವ್ಯಕ್ತಿಯೊಬ್ಬ ಶೌಚಾಲಯದಿಂದಲೇ ನ್ಯಾಯಾಲಯದ ವಿಚಾರಣೆಗೆ ಹಾಜರಾದ ಆಘಾತಕಾರಿ ಘಟನೆ ಜೂ.20ರಂದು ಗುಜರಾತ್‌ ಹೈಕೋರ್ಟ್‌ನಲ್ಲಿ ನಡೆದಿದೆ.

ಅಹಮದಾಬಾದ್: ವ್ಯಕ್ತಿಯೊಬ್ಬ ಶೌಚಾಲಯದಿಂದಲೇ ನ್ಯಾಯಾಲಯದ ವಿಚಾರಣೆಗೆ ಹಾಜರಾದ ಆಘಾತಕಾರಿ ಘಟನೆ ಜೂ.20ರಂದು ಗುಜರಾತ್‌ ಹೈಕೋರ್ಟ್‌ನಲ್ಲಿ ನಡೆದಿದೆ.

ಪ್ರಕರಣವೊಂದರ ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾದ ವ್ಯಕ್ತಿಯೊಬ್ಬ ಕಮೋಡ್‌ ಮೇಲೆ ಕುಳಿತುಕೊಂಡು ಕಿವಿಗೆ ಇಯರ್‌ಫೋನ್‌ ಹಾಕಿಕೊಂಡು ವಿಚಾರಣೆ ಆಲಿಸಿದ್ದಾನೆ. ಪ್ರಕರಣವೊಂದರಲ್ಲಿ ದಾಖಲಾಗಿದ್ದ ಎಫ್‌ಐಆರ್‌ ರದ್ದುಕೋರಿ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು.

 ಆ ಅರ್ಜಿದಾರರ ಪರ ಈ ವ್ಯಕ್ತಿ ವಿಚಾರಣೆಗೆ ಹಾಜರಾಗಿದ್ದ ಎನ್ನಲಾಗಿದೆ. ಕಳೆದ ಮಾರ್ಚ್‌ನಲ್ಲಿ ಕೂಡಾ ಗುಜರಾತ್‌ ಹೈಕೋರ್ಟ್‌ನಲ್ಲಿ ಇದೇ ರೀತಿ ಘಟನೆ ನಡೆದು, ಆ ವ್ಯಕ್ತಿಗೆ ಕೋರ್ಟ್‌ 2 ಲಕ್ಷ ರು. ದಂಡ ವಿಧಿಸಿತ್ತು. ಅಲ್ಲದೆ ಸಮುದಾಯ ಸೇವೆಗೂ ಸೂಚಿಸಿತ್ತು.