ಸಾರಾಂಶ
ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಅಸ್ಸಾಂನಿಂದ ರಾಜ್ಯಸಭಾ ಸದಸ್ಯರಾಗಿದ್ದ ಸಮಯದಲ್ಲಿ ಅಲ್ಲಿನ ಅಂದಿನ ಮುಖ್ಯಮಂತ್ರಿಗಳ ನಿವಾಸದಲ್ಲೇ ಬಾಡಿಗೆಗೆ ಇದ್ದರು ಎಂಬ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ.
ಗುವಾಹಟಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಅಸ್ಸಾಂನಿಂದ ರಾಜ್ಯಸಭಾ ಸದಸ್ಯರಾಗಿದ್ದ ಸಮಯದಲ್ಲಿ ಅಲ್ಲಿನ ಅಂದಿನ ಮುಖ್ಯಮಂತ್ರಿಗಳ ನಿವಾಸದಲ್ಲೇ ಬಾಡಿಗೆಗೆ ಇದ್ದರು ಎಂಬ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ.
ಈ ಕುರಿತು ಅಂದು ಅಸ್ಸಾಂ ಸಿಎಂ ಆಗಿದ್ದ ಹಿತೇಶ್ವರ್ ಸೈಕಿಯಾ ಅವರ ಪತ್ನಿ ಹೇಮೋಪ್ರವಾ ಮಾತನಾಡಿ, ‘ಪ್ರಧಾನಿಯಾಗಿದ್ದ ನರಸಿಂಹ ರಾವ್ ಅವರು ಸಿಂಗ್ ಅವರನ್ನು ರಾಜಕೀಯಕ್ಕೆ ಕರೆತಂದು ವಿತ್ತಸಚಿವರನ್ನಾಗಿ ಮಾಡಲು ಬಯಸಿದಾಗ ಅವರು ಈ ವಿಷಯವನ್ನು ನನ್ನ ಪತಿ ಸೈಕಿಯಾರ ಬಳಿ ಚರ್ಚಿಸಿದ್ದರು. ಆಗ ಸೈಕಿಯಾ, ನಿಮ್ಮನ್ನು ರಾಜ್ಯಸಭೆಗೆ ಕಳಿಸುವ ಸಾಧ್ಯೆ ಇದೆ ಎಂದಿದ್ದರು.
ಆದರೆ ಸಿಂಗ್ ಅಸ್ಸಾಂನವರಲ್ಲದ ಕಾರಣ ಹಲವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಅವರಿಗೆ ರಾಜ್ಯದಲ್ಲಿ ವಿಳಾಸವೇ ಇಲ್ಲ ಎಂಬ ನೆಪವೊಡ್ಡಿ ಕೋರ್ಟ್ ಕದವನ್ನೂ ತಟ್ಟಿದ್ದರು. ಆಗಲೇ ಅವರಿಗೆ ನಾವು 2ಬಿಎಹ್‌ಕೆ ಮನೆಯನ್ನು 700 ರು.ಗೆ ಬಾಡಿಗೆಗೆ ನೀಡಿದ್ದೆವು. ಅಸ್ಸಾಂ ಹಾಗೂ ತಮ್ಮ ನಡುವೆ ನಂಟು ಬೆಸೆದದ್ದೇ ಆ ಮನೆ ಎಂಬ ಕಾರಣಕ್ಕೆ ಅದನ್ನೇ ಅವರು ಶಾಶ್ವತ ವಿಳಾಸವಾಗಿಸಿಕೊಂಡರು’ ಎಂದರು.
ಸಿಂಗ್‌ರ ಉದಾರತೆ ಹಾಗೂ ಹೃದಯ ವೈಶಾಲ್ಯತೆಯನ್ನು ಬಣ್ಣಿಸಿದ ಸೈಕಿಯಾ, ‘ಪ್ರಧಾನಿಯಾದ ಬಳಿಕವೂ ಅವರು ಚೆಕ್ ಮೂಲಕ ಬಾಡಿಗೆ ಪಾವತಿಸುತ್ತಿದ್ದರು. ಒಮ್ಮೆ ನಾವು ಅದನ್ನು ಬಳಸಿ ನಗದು ಪಡೆಯದೇ ಇದ್ದಾಗ ಇನ್ನೊಂದು ಚೆಕ್ ಕಳಿಸಿದ್ದರು’ ಎಂದರು.