- ,ಮತ್ತಿಬ್ಬರು ಮಾವೋವಾದಿಗಳೂ ಬಂಧನ
- ಜಾರ್ಖಂಡ್‌ನಲ್ಲಿ ನಕ್ಸಲಿಸಂ ಬಹುತೇಕ ಅಂತ್ಯ- ಛತ್ತೀಸ್‌ಗಢದಲ್ಲಿ 8 ನಕ್ಸಲರು ಶರಣು
ರಾಂಚಿ/ಬಿಜಾಪುರ: ಜಾರ್ಖಂಡ್‌ನಲ್ಲಿ ನಕ್ಸಲ್ ವಿರೋಧಿ ಮಹತ್ವದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆ ಸಿಬ್ಬಂದಿ, 175 ಪ್ರಕರಣಗಳಲ್ಲಿ ಬೇಕಾಗಿದ್ದ 2.2 ಕೋಟಿ ರು. ಇನಾಮು ಹೊಂದಿದ್ದ ಕುಖ್ಯಾತ ನಕ್ಸಲ್ ಮಿಸಿರ್ ಬೆಸ್ರಾ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ನಕ್ಸಲಿಸಂ ಬಹುತೇಕ ಅಂತ್ಯವಾದಂತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಪೊಲೀಸರ ಆಪರೇಷನ್ ದೌರಾ ಪಹಾದ್ ಕಾರ್ಯಾಚರಣೆ ವೇಳೆ ಈ ಬಂಧನವಾಗಿದೆ. ಇದರ ಜತೆಗೆ 15 ಲಕ್ಷ ಬಹುಮಾನ ಹೊಂದಿದ್ದ ಮೆಹನಾತ್ ಅಲಿಯಾಸ್ ಮೋಚು ಹಾಗೂ ಗೌರವ ಎಂಬಾತನನ್ನು ಬಂಧಿಸಿದ್ದಾರೆ. ಮೂವರ ಮೇಲೆ ಒಟ್ಟು 320 ಕ್ರಿಮಿನಲ್ ಪ್ರಕರಣಗಳಿವೆ. ಹಲವಾರು ಬ್ಯಾಂಕ್ ದರೋಡೆ, ಐಇಡಿ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. 100ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಸಾವಿಗೆ ಕಾರಣರಾಗಿದ್ದರು. 65 ವರ್ಷದ ಬೆಸ್ರಾ ನಿಷೇಧಿತ ಸಂಘಟನೆಯ ರಾಜಕೀಯ ಘಟಕದ ಏಕೈಕ ಸಕ್ರಿಯ ಸದಸ್ಯನಾಗಿದ್ದನು. ಆತನ ಬಂಧನಕ್ಕಾಗಿ ಜಾರ್ಖಂಡ್ ಮತ್ತು ಒಡಿಶಾ ಸರ್ಕಾರಗಳು 2. 20 ಕೋಟಿ ರು. ಇನಾಮು ಘೋಷಿಸಿದ್ದವು. ಸಾಗರ್ ದಾ ಮತ್ತು ಬಾಸ್ಕರ್ ದಾ ಎನ್ನುವ ಹೆಸರುಗಳಿಂದಲೂ ಕರೆಯಲ್ಪಡುತ್ತಿದ್ದನು. 1980ರಲ್ಲಿ ನಿಷೇಧಿತ ಸಂಘಟನೆಯನ್ನು ಸೇರಿಕೊಂಡು 2003ರಲ್ಲಿ ಕೇಂದ್ರೀಯ ಸಮಿತಿ ಸದಸ್ಯನಾಗಿದ್ದನು. ಮಾತ್ರವಲ್ಲದೇ ಪಶ್ಚಿಮ ಬಂಗಾಳದಲ್ಲಿ 175 ಪ್ರಕರಣಗಳು ಇತನ ಕೂಡ ದಾಖಲಾಗಿತ್ತು.
ಛತ್ತೀಸ್‌ಗಢದಲ್ಲಿ 8 ನಕ್ಸಲರು ಶರಣು:
ಛತ್ತೀಸ್‌ಗಢದಲ್ಲಿಯೂ 49 ಲಕ್ಷ ರು. ಇನಾಮು ಹೊಂದಿದ್ದ 8 ನಕ್ಸಲರು ಬುಧವಾರ ಪೊಲೀಸರಿಗೆ ಶರಣಾಗಿದ್ದಾರೆ. ಇವರಲ್ಲಿ ಐವರು ಮಹಿಳಾ ನಕ್ಸಲರೂ ಸೇರಿದ್ದಾರೆ.