ಸಾರಾಂಶ
ಭಾರತ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಹಾಗೂ ಇತರೆ ಪ್ರಮುಖ ದೇಶಗಳನ್ನು ಸಂಪರ್ಕಿಸುವ ಸಮುದ್ರದಡಿ 50 ಸಾವಿರ ಕಿ.ಮೀ. ಉದ್ದದ ಕೇಬಲ್ ಅಳವಡಿಸುವ ಲಕ್ಷಾಂತರ ಕೋಟಿ ರುಪಾಯಿ ವೆಚ್ಚದ ಮೆಗಾ ಯೋಜನೆಯೊಂದನ್ನು ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಕೈಗೆತ್ತಿಕೊಳ್ಳಲಿದೆ.
ವಾಷಿಂಗ್ಟನ್: ಭಾರತ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಹಾಗೂ ಇತರೆ ಪ್ರಮುಖ ದೇಶಗಳನ್ನು ಸಂಪರ್ಕಿಸುವ ಸಮುದ್ರದಡಿ 50 ಸಾವಿರ ಕಿ.ಮೀ. ಉದ್ದದ ಕೇಬಲ್ ಅಳವಡಿಸುವ ಲಕ್ಷಾಂತರ ಕೋಟಿ ರುಪಾಯಿ ವೆಚ್ಚದ ಮೆಗಾ ಯೋಜನೆಯೊಂದನ್ನು ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಕೈಗೆತ್ತಿಕೊಳ್ಳಲಿದೆ. ಪ್ರಾಜೆಕ್ಟ್ ವಾಟರ್‌ವರ್ಥ್ ಹೆಸರಿನ ಈ ಯೋಜನೆ ಭಾರತದ ಡಿಜಿಟಲ್ ಆರ್ಥಿಕತೆಗೆ ನೆರವು ನೀಡುವ ಉದ್ದೇಶ ಹೊಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿ ವೇಳೆ ಭಾರತ ಮತ್ತು ಅಮೆರಿಕ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಈ ಯೋಜನೆ ಕುರಿತು ಪ್ರಸ್ತಾಪಿಸಲಾಗಿದೆ.ಯೋಜನೆಯಡಿ ಹಿಂದೂ ಮಹಾಸಾಗರದಲ್ಲಿ ಅಳವಡಿಸಲಾಗುವ ಈ ಕೇಬಲ್‌ಗೆ ಹಣಕಾಸು ನೆರವು, ನಿರ್ವಹಣೆ, ರಿಪೇರಿಯ ಜವಾಬ್ದಾರಿಯನ್ನು ಭಾರತವು ವಹಿಸಿಕೊಳ್ಳಲಿದೆ. ವಿಶ್ವದ ಅತಿದೊಡ್ಡ, ಬೃಹತ್ ಸಾಮರ್ಥ್ಯದ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಸಮುದ್ರದಡಿ ಅಳವಡಿಸುವ ಈ ಕೇಬಲ್ ಯೋಜನೆ ಐದು ಉಪಖಂಡಗಳನ್ನು ಸಂಪರ್ಕಿಸಲಿದೆ. ಈ ದಶಕದ ಅಂತ್ಯದಲ್ಲಿ ಈ ಕೇಬಲ್ ಯೋಜನೆ ಪೂರ್ಣಗೊಳ್ಳಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃತಕಬುದ್ಧಿಮತ್ತೆ(ಎಐ)ಯಲ್ಲಿ ಸಾಧನೆ ಮಾಡಲು ಈ ರೀತಿ ಹೈಸ್ಪೀಡ್ ನೆಟ್‌ವರ್ಕ್‌ನ ಅಗತ್ಯವಿದ್ದು, ಇದರಿಂದ ಭಾರತಕ್ಕೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಹೇಳಲಾಗಿದೆ.