6 ಜನರ ಹತ್ಯೆಗೈದವರ ಉಗ್ರರ ದಾಳಿ’ ಎಂದು ಕರೆಯಲು ಕಾಶ್ಮೀರ ಸಿಎಂ ಒಮರ್‌ ಅಬ್ದುಲ್ಲಾ ಹಿಂದೇಟು

| Published : Oct 22 2024, 12:06 AM IST / Updated: Oct 22 2024, 05:08 AM IST

ಸಾರಾಂಶ

ಜಮ್ಮು ಕಾಶ್ಮೀರದ ಗಂದರ್ಬಾಲ್‌ ಜಿಲ್ಲೆಯಲ್ಲಿ ನಾಗರಿಕರ ಮೇಲೆ ನಡೆದ ದಾಳಿಯನ್ನು ‘ಉಗ್ರ ದಾಳಿ’ ಎಂದು ಕರೆಯಲು ಸಿಎಂ ಒಮರ್‌ ಅಬ್ದುಲ್ಲಾ ಹಿಂದೇಟು ಹಾಕಿದ್ದಾರೆ. ಅವರ ಈ ನಡೆಗೆ ಭಾರೀ ಟೀಕೆ ವ್ಯಕ್ತವಾಗಿದೆ.

ಶ್ರೀನಗರ: ಜಮ್ಮು ಕಾಶ್ಮೀರದ ಗಂದರ್ಬಾಲ್‌ ಜಿಲ್ಲೆಯಲ್ಲಿ ನಾಗರಿಕರ ಮೇಲೆ ನಡೆದ ದಾಳಿಯನ್ನು ‘ಉಗ್ರ ದಾಳಿ’ ಎಂದು ಕರೆಯಲು ಸಿಎಂ ಒಮರ್‌ ಅಬ್ದುಲ್ಲಾ ಹಿಂದೇಟು ಹಾಕಿದ್ದಾರೆ. ಅವರ ಈ ನಡೆಗೆ ಭಾರೀ ಟೀಕೆ ವ್ಯಕ್ತವಾಗಿದೆ.

ಶ್ರೀನಗರ್- ಲೇಹ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿದ್ದ ಸುರಂಗ ನಿರ್ಮಾಣಕ್ಕಾಗಿ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ವೇಳೆ ಕಾರ್ಮಿಕರ ಮೇಲೆ ನಡೆದ ದಾಳಿಯನ್ನು ಖಂಡಿಸಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಒಮರ್‌, ದಾಳಿ ಮಾಡಿದವರನ್ನು ಉಗ್ರರೆಂದು ಟೀಕಿಸುವುದರಿಂದ ದೂರವೇ ಉಳಿದಿದ್ದಾರೆ. 

ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದ್ದು, ‘ಜ್ಮಮು ಕಾಶ್ಮೀರದಲ್ಲಿ ಎನ್‌ಸಿ ಹಾಗೂ ಉಗ್ರವಾದ ಮರಳಿದೆ. ನಿಮ್ಮ ಪರಿವಾರ ಉಗ್ರರ ಪರ ಎಂದು ತಿಳಿದಿದೆ. ಆದರೆ ಸಾರ್ವಜನಿಕ ವೇದಿಕೆಗಳಲ್ಲಾದರೂ ಅವರನ್ನು ನೇರವಾಗಿ ಉಗ್ರರು ಎಂದು ಕರೆಯಿರಿ’ ಎಂದು ಜನ ವ್ಯಂಗ್ಯವಾಡಿದ್ದಾರೆ. ಅತ್ತ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಕೂಡ ಇದನ್ನು ಉಗ್ರ ದಾಳಿ ಎಂದು ಕರೆದಿಲ್ಲ.