ರಾಷ್ಟ್ರೀಯ ಹೆದ್ದಾರಿಯೇಗಬೇಕಿದ್ದ ಸ್ಥಿತಿ ಅಧೋಗತಿ

Jul 29 2025, 01:00 AM IST
ಚನ್ನರಾಯಪಟ್ಟಣ- ಹೊಳೆನರಸೀಪುರ ಮಾರ್ಗವಾಗಿ ಬೂವನಹಳ್ಳಿ ಕ್ರಾಸ್ ಗಡಿ ಭಾಗದಿಂದ ಕಳ್ಳಿಮುದ್ದನಹಳ್ಳಿ, ಹೆತ್ತಗೌಡನಹಳ್ಳಿ, ಬೈಚನಹಳ್ಳಿ, ಹೊಡಿಕೆಕಟ್ಟೆ, ಚಿಕ್ಕಗಾವನಹಳ್ಳಿ, ದೇವರಹಳ್ಳಿ, ಹೊನ್ನವಳಿ ಬಳಿ ಅಲ್ಲಲ್ಲಿ ಡಾಂಬರು ಕಿತ್ತು ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ. ಅರಕಲಗೂಡಿನ ಚನ್ನಬಸವೇಶ್ವರ ವೃತ್ತದಿಂದ ಆರಂಭವಾಗುವ ಗುಂಡಿ ಹೊಂಡಗಳು ಚನ್ನರಾಯಪಟ್ಟಣದ ಗನ್ನಿಕಡ ತನಕ ಹೆಜ್ಜೆಗೊಂದು ಬಾಯ್ತೆರೆದು ಸಾವಿನ ಹೆದ್ದಾರಿಯಾಗಿ ಮಾರ್ಪಟ್ಟಿದೆ. ಹದಗೆಟ್ಟ ರಸ್ತೆಯಲ್ಲಿ ವಾಹನಗಳ ಅಪಘಾತ ದಿನನಿತ್ಯ ತಪ್ಪದಾಗಿದೆ. ಮೈಸೂರಿಗೆ ತೆರಳಲು ಹೊಳೆನರಸೀಪುರ ಮಾರ್ಗದ ಬದಲು ಅರಕಲಗೂಡಿನಿಂದ ಕೇರಳಾಪುರ ಇಲ್ಲವೇ ಪಿರಿಯಾಪಟ್ಟಣ ಮಾರ್ಗವಾಗಿ ವಾಹನಗಳು ಓಡಾಡುವಂತಾಗಿದೆ.