ಕಾಂಗ್ರೆಸ್‌ ಪ್ರಣಾಳಿಕೆ ಹಿಂದೆ ವಿದೇಶಿ ಶಕ್ತಿ: ಠಾಕೂರ್‌

| Published : Apr 28 2024, 01:17 AM IST / Updated: Apr 28 2024, 05:18 AM IST

ಕಾಂಗ್ರೆಸ್‌ ಪ್ರಣಾಳಿಕೆ ಹಿಂದೆ ವಿದೇಶಿ ಶಕ್ತಿ: ಠಾಕೂರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಪ್ರಣಾಳಿಕೆಯನ್ನು ವಿದೇಶಿ ಶಕ್ತಿಗಳು ತಯಾರಿಸಿ ದೇಶವನ್ನು ಧರ್ಮ ಮತ್ತು ಪ್ರಾಂತ್ಯಗಳ ಆಧಾರದಲ್ಲಿ ಒಡೆಯುವ ಹುನ್ನಾರ ಮಾಡಿವೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಆರೋಪಿಸಿದ್ದಾರೆ.

ಹಮೀರ್‌ಪುರ: ಕಾಂಗ್ರೆಸ್‌ ಪ್ರಣಾಳಿಕೆಯನ್ನು ವಿದೇಶಿ ಶಕ್ತಿಗಳು ತಯಾರಿಸಿ ದೇಶವನ್ನು ಧರ್ಮ ಮತ್ತು ಪ್ರಾಂತ್ಯಗಳ ಆಧಾರದಲ್ಲಿ ಒಡೆಯುವ ಹುನ್ನಾರ ಮಾಡಿವೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಆರೋಪಿಸಿದ್ದಾರೆ.

ಶನಿವಾರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಪ್ರಣಾಳಿಕೆಯನ್ನು ವಿದೇಶದ ತುಕ್ಡೆ ತುಕ್ಡೆ ಗ್ಯಾಂಗ್‌ಗಳು ತಯಾರಿಸಿವೆ. ಅವರು ಕಾಂಗ್ರೆಸ್‌ ಸಿದ್ಧಾಂತವನ್ನು ಸಂಪೂರ್ಣ ಆಪೋಶನ ತೆಗೆದುಕೊಂಡು ರಾಷ್ಟ್ರವನ್ನು ನಾಶ ಮಾಡುವಂತಹ ಅಂಶಗಳನ್ನು ಸೇರಿಸಿವೆ. ಪ್ರಮುಖವಾಗಿ ಆಸ್ತಿ ಮರುಹಂಚಿಕೆ ಹೆಸರಿನಲ್ಲಿ ಮುಸ್ಲಿಮರಿಗೆ ಚಿನ್ನ ಕೊಡುವುದು ಮತ್ತು ದೇಶವನ್ನು ಅಣುಬಾಂಬ್‌ನೊಂದಿಗೆ ಸಮಾಧಿ ಮಾಡುವ ಹುನ್ನಾರ ನಡೆಸಿವೆ’ ಎಂದು ತಿಳಿಸಿದರು.

ಈ ನಡುವೆ ಬಿಜೆಪಿಯೂ ಸಹ ಮುಸ್ಲಿಮರಿಗೆ ದೇಶದಲ್ಲಿ ಸಮಾನ ಹಕ್ಕುಗಳನ್ನು ನೀಡಿದ್ದು, ಧರ್ಮದ ಬದಲಾಗಿ ಅವರ ಹಕ್ಕಿನ ಆಧಾರದಲ್ಲಿ ನೀಡಿರುವುದಾಗಿ ಪ್ರತಿಪಾದಿಸಿದರು.