ಸಾಲದ ಮಾಸಿಕ ಕಂತುಗಳನ್ನು ದೀರ್ಘಕಾಲ ಬಾಕಿ ಉಳಿಸಿಕೊಂಡರೆ ಬೈಕ್‌ ಮತ್ತು ಕಾರನ್ನು ಸಾಲ ನೀಡಿದ ಕಂಪನಿಗಳು ಜಪ್ತಿ ಮಾಡಿದಂತೆ ಇನ್ನು ಮುಂದೆ ಮೊಬೈಲ್ ಕೂಡಾ ಡಿಜಿಟಲೀ ಜಪ್ತಿಯಾಗಲಿದೆ.

ಮುಂಬೈ: ಸಾಲದ ಮಾಸಿಕ ಕಂತುಗಳನ್ನು ದೀರ್ಘಕಾಲ ಬಾಕಿ ಉಳಿಸಿಕೊಂಡರೆ ಬೈಕ್‌ ಮತ್ತು ಕಾರನ್ನು ಸಾಲ ನೀಡಿದ ಕಂಪನಿಗಳು ಜಪ್ತಿ ಮಾಡಿದಂತೆ ಇನ್ನು ಮುಂದೆ ಮೊಬೈಲ್ ಕೂಡಾ ಡಿಜಿಟಲೀ ಜಪ್ತಿಯಾಗಲಿದೆ.

ಹೌದು. ಇಂಥಹ ಒಂದು ಕ್ರಮ ಕೈಗೊಳ್ಳಲು ಭಾರತೀಯ ರಿಸರ್ವ್‌ ಬ್ಯಾಂಕ್ ಚಿಂತನೆ ನಡೆಸಿದೆ. ಮೊಬೈಲ್‌ ಅನ್ನು ಸಾಲ ಮಾಡಿ ಖರೀದಿ ಮಾಡಿ ಅದರ ಪ್ರತಿ ತಿಂಗಳ ಕಂತು (ಇಎಂಐ) ಸರಿಯಾಗಿ ಪಾವತಿ ಮಾಡದೇ ಇದ್ದಲ್ಲಿ ಅದನ್ನು ಲಾಕ್‌ ಮಾಡಲು ಆರ್‌ಬಿಐ ಚಿಂತನೆ ನಡೆಸಿದೆ.

ಈ ಬಗ್ಗೆ ಗುರುವಾರ ಮಾತಾಡಿದ ಆರ್‌ಬಿಐನ ಉಪ ಗವರ್ನರ್‌ ರಾಜೇಶ್ವರ್‌ ರಾವ್‌, ‘ಈ ಯೋಜನೆಯ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಈಗ ವಾಹನಗಳ ಸಾಲದ ಪಾವತಿ ಸರಿಯಾಗಿ ಆಗದಿದ್ದಲ್ಲಿ ಬ್ಯಾಂಕುಗಳು ಅವುಗಳನ್ನು ಜಪ್ತಿ ಮಾಡುತ್ತವೆ. ಆದರೆ ಫೋನ್‌ಗೆ ಅಂತಹ ಕ್ರಮಗಳಿಲ್ಲ. ಅದಕ್ಕಾಗಿ ಸಾಲಗಾರರು ಮತ್ತು ಗ್ರಾಹಕರ ವಿಚಾರಗಳನ್ನು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.