ತಮಿಳುನಾಡು ರಾಜಧಾನಿ ಚೆನ್ನೈ ಮೂಲದ ಸ್ಟಾರ್ಟಪ್‌ ಕಂಪನಿಯ ದೇಶದ ಮೊದಲ ಮರು ಬಳಕೆ ಹೈಬ್ರಿಡ್‌ ರಾಕೆಟ್‌ ನಾಳೆ ನಭಕ್ಕೆ

| Published : Aug 23 2024, 01:04 AM IST / Updated: Aug 23 2024, 04:57 AM IST

ತಮಿಳುನಾಡು ರಾಜಧಾನಿ ಚೆನ್ನೈ ಮೂಲದ ಸ್ಟಾರ್ಟಪ್‌ ಕಂಪನಿಯ ದೇಶದ ಮೊದಲ ಮರು ಬಳಕೆ ಹೈಬ್ರಿಡ್‌ ರಾಕೆಟ್‌ ನಾಳೆ ನಭಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ತಮಿಳುನಾಡು ರಾಜಧಾನಿ ಚೆನ್ನೈ ಮೂಲದ ಸ್ಟಾರ್ಟಪ್‌ ಕಂಪನಿಯೊಂದು ಮರುಬಳಕೆಯ ಹೈಬ್ರಿಡ್‌ ರಾಕೆಟ್‌ ಅನ್ನು ಶನಿವಾರ ಉಡಾವಣೆ ಮಾಡಲಿದೆ.

ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈ ಮೂಲದ ಸ್ಟಾರ್ಟಪ್‌ ಕಂಪನಿಯೊಂದು ಮರುಬಳಕೆಯ ಹೈಬ್ರಿಡ್‌ ರಾಕೆಟ್‌ ಅನ್ನು ಶನಿವಾರ ಉಡಾವಣೆ ಮಾಡಲಿದೆ. 53 ಸಣ್ಣ ಉಪಗ್ರಹಗಳನ್ನು ಹೊತ್ತಿರುವ ಈ ರಾಕೆಟ್‌ ದೇಶದ ಮೊದಲ ಮರುಬಳಕೆಯ ಹೈಬ್ರಿಡ್‌ ರಾಕೆಟ್‌ ಆಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಗಮನಾರ್ಹ ಎಂದರೆ, ಯಶಸ್ವಿ ಚಂದ್ರಯಾನದ ಮೂಲಕ ದೇಶದ ‘ಮೂನ್‌ಮ್ಯಾನ್‌’ ಎಂದೇ ಜನಪ್ರಿಯರಾಗಿರುವ ಇಸ್ರೋದ ಮಾಜಿ ನಿರ್ದೇಶಕ ಎಂ. ಅಣ್ಣಾದುರೈ ಅವರು ಈ ಯೋಜನೆಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಯೋಜನೆಗೆ ‘ಮಿಷನ್‌ ರೂಮಿ-2024’ ಎಂದು ಹೆಸರಿಡಲಾಗಿದೆ.

ಶನಿವಾರ ಬೆಳಗ್ಗೆ ಈಸ್ಟ್‌ ಕೋಸ್ಟ್‌ ರಸ್ತೆಯ ಟಿಟಿಡಿಸಿ ಮೈದಾನದಲ್ಲಿ ಬೆಳಗ್ಗೆ 7ಕ್ಕೆ ಈ ರಾಕೆಟ್‌ ಉಡಾವಣೆ ನಡೆಯಲಿದೆ. ಲಾರಿಯ ಮೇಲೆ ಹೈಡ್ರಾಲಿಕ್‌ ಲಾಂಚರ್‌ ಇಟ್ಟು ರಾಕೆಟ್‌ ಉಡಾವಣೆ ಮಾಡಲಾಗುತ್ತದೆ. ಈ ಸಂಬಂಧ ಸರ್ಕಾರ, ನಾಗರಿಕ ವಿಮಾನಯಾನ ನಿರ್ದೇಶನಾಲಯ, ವಾಯುಪಡೆಯ ತಾಂಬರಂ ನೆಲೆ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಅನುಮತಿಯನ್ನೂ ಪಡೆಯಲಾಗಿದೆ ಎಂದು ಸ್ಪೇಸ್‌ ಜೋನ್‌ ಇಂಡಿಯಾ ಕಂಪನಿಯ ಸಿಇಒ ಆನಂದ ಮೆಗಲಿಂಗಂ ಅವರು ತಿಳಿಸಿದ್ದಾರೆ. ಈ ರಾಕೆಟ್‌ಗೆ ದ್ರವ ಹಾಗೂ ಘನ ಇಂಧನವನ್ನು ಬಳಕೆ ಮಾಡುವ ಕಾರಣ ಇದು ಹೈಬ್ರಿಡ್‌ ರಾಕೆಟ್‌ ಆಗಿದೆ ಎಂದಿದ್ದಾರೆ.