ವಿದ್ಯುತ್ ಅವಘಡ ತಪ್ಪಿಸುವ ಸಲುವಾಗಿ, ರೈಲಿನಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 5 ಗಂಟೆಯ ತನಕ ಅಂದರೆ 6 ತಾಸು ಮೊಬೈಲ್‌ ಚಾರ್ಜಿಂಗ್‌ಗೆ ನಿರ್ಬಂಧವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ.

ನವದೆಹಲಿ: ವಿದ್ಯುತ್ ಅವಘಡ ತಪ್ಪಿಸುವ ಸಲುವಾಗಿ, ರೈಲಿನಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 5 ಗಂಟೆಯ ತನಕ ಅಂದರೆ 6 ತಾಸು ಮೊಬೈಲ್‌ ಚಾರ್ಜಿಂಗ್‌ಗೆ ನಿರ್ಬಂಧವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ.

ಇತ್ತೀಚೆಗೆ ರೈಲುಗಳಲ್ಲಿ ಚಾರ್ಜ್‌ಗೆ ಇಟ್ಟಿದ್ದ ಪವರ್ ಬ್ಯಾಂಕ್ ಸ್ಫೋಟ

ಇತ್ತೀಚೆಗೆ ರೈಲುಗಳಲ್ಲಿ ಚಾರ್ಜ್‌ಗೆ ಇಟ್ಟಿದ್ದ ಪವರ್ ಬ್ಯಾಂಕ್ ಹಾಗೂ ಮೊಬೈಲ್‌ಗಳು ಅತಿಯಾಗಿ ಬಿಸಿಯಾಗಿ ಸ್ಫೋಟಗೊಂಡ ಮತ್ತು ಅಗ್ನಿ ಅವಘಡಗಳು ಸಂಭವಿಸಿದ ಘಟನೆಗಳ ಹಿನ್ನೆಲೆಯಲ್ಲಿ ಈ ಹಿಂದಿನ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಮತ್ತೆ ಆದೇಶ ಹೊರಡಿಸಲಾಗಿದೆ.

ಅವಘಢಗಳ ಹಿನ್ನೆಲೆ ಕಟ್ಟುನಿಟ್ಟಿನ ಜಾರಿಗೆ

2014ರ ಜೂ.19ರಂದೇ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ ಆಫ್ ಮಾಡಲು ರೈಲ್ವೆ ಇಲಾಖೆ ನಿರ್ದೇಶಿಸಿತ್ತು. ಹೀಗಿದ್ದರೂ ಅವಘಢಗಳ ಹಿನ್ನೆಲೆ ಕಟ್ಟುನಿಟ್ಟಿನ ಜಾರಿಗೆ ಸೂಚನೆ ನೀಡಿದೆ.