ಭಾರತ ಮತ್ತು ಪಾಕಿಸ್ತಾನದ ನಡುವೆ ಸಮರ ವಿರಾಮ ಘೋಷಣೆಯಾಗಿದ್ದರೂ ಉದ್ವಿಗ್ನತೆ ಮುಂದುವರೆದಿರುವ ಹೊತ್ತಿನಲ್ಲಿ, ವೈರಿರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯಗಳಲ್ಲಿ ಶನಿವಾರ 2ನೇ ಸುತ್ತಿನ ಅಣಕು ಕವಾಯತು ನಡೆಸಲಾಗಿದೆ.

ಜೈಪುರ/ಚಂಡೀಗಢ: ಭಾರತ ಮತ್ತು ಪಾಕಿಸ್ತಾನದ ನಡುವೆ ಸಮರ ವಿರಾಮ ಘೋಷಣೆಯಾಗಿದ್ದರೂ ಉದ್ವಿಗ್ನತೆ ಮುಂದುವರೆದಿರುವ ಹೊತ್ತಿನಲ್ಲಿ, ವೈರಿರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯಗಳಲ್ಲಿ ಶನಿವಾರ 2ನೇ ಸುತ್ತಿನ ಅಣಕು ಕವಾಯತು ನಡೆಸಲಾಗಿದೆ.

ರಾಜಸ್ಥಾನ, ಪಂಜಾಬ್‌, ಹರ್ಯಾಣ, ಕಾಶ್ಮೀರ, ಗುಜರಾತ್‌, ಚಂಡಿಗಢ ರಾಜ್ಯಗಳಲ್ಲಿ, ಜನರನ್ನು ಯುದ್ಧಸನ್ನದ್ಧರಾಗಿಸುವ ಸಲುವಾಗಿ ‘ಆಪರೇಷನ್‌ ಶೀಲ್ಡ್‌’(ಕವಚ) ಹೆಸರಿನಲ್ಲಿ ಸೈರನ್‌ ಮೊಳಗಿದಾಗ, ವಾಯುದಾಳಿ, ಡ್ರೋನ್‌ ದಾಳಿ ನಡೆದಾಗ ಹೇಗೆ ಪ್ರತಿಕ್ರಿಯಿಸಬೇಕು ಮತ್ತು ರಕ್ಷಿಸಿಕೊಳ್ಳಬೇಕು ಎಂಬ ಬಗ್ಗೆ ಜನರಿಗೆ ತರಬೇತಿ ನೀಡಲಾಯಿತು. ಶಾಲೆಗಳಲ್ಲೂ ಈ ಡ್ರಿಲ್‌ ನಡೆಸಿ ವಿದ್ಯಾರ್ಥಿಗಳಿಗೆ ಕಲಿಸಿಕೊಡಲಾಯಿತು.

ಪಾಕ್‌ ಉದ್ಧಟತನಕ್ಕೆ ಭಾರತ ಈಗಾಗಲೇ ತಕ್ಕ ಉತ್ತರ ನೀಡಿದೆಯಾದರೂ, ’ಆಪರೇಷನ್‌ ಸಿಂದೂರ ಇನ್ನೂ ನಿಂತಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆಮತ್ತೆ ಹೇಳುತ್ತಿರುವ ಹೊತ್ತಿನಲ್ಲೇ ಈ ಕವಾಯತು ನಡೆದಿರುವುದು ಮಹತ್ವ ಪಡೆದುಕೊಂಡಿದೆ.

ಕಳೆದ ಬಾರಿ ದೇಶದ ಹಲವು ರಾಜ್ಯಗಳಲ್ಲಿ ಮೇ 7ರಂದು ಮಾಕ್‌ ಡ್ರಿಲ್‌ ನಡೆಸುವಂತೆ ನಿರ್ದೇಶಿಸಲಾಗಿತ್ತು. ಅದರ ಹಿಂದಿನ ತಡರಾತ್ರಿಯೇ ‘ಆಪರೇಷನ್‌ ಸಿಂದೂರ’ ನಡೆಸಿ ಪಾಕ್‌ಗೆ ಶಾಕ್‌ ಕೊಡಲಾಯಿತು.