ಸಾರಾಂಶ
ಪ್ರಸ್ತುತ ಮುಂಗಾರು ವರ್ಷದಲ್ಲಿ ಭಾರತದಾದ್ಯಂತ ಸಾಧಾರಣ ಮುಂಗಾರು ಮಳೆಯಾಗಲಿದ್ದು, ದೀಘ ಕಾಲೀನ ಸರಾಸರಿಯ ಶೇ.102ರಷ್ಟು ಅಂದರೆ ಜೂನ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟಾರೆ 868.6 ಮಿ.ಮೀ ಮಳೆಯಾಗುವ ಸಾಧ್ಯತೆಯಿದೆ
ನವದೆಹಲಿ: ಪ್ರಸ್ತುತ ಮುಂಗಾರು ವರ್ಷದಲ್ಲಿ ಭಾರತದಾದ್ಯಂತ ಸಾಧಾರಣ ಮುಂಗಾರು ಮಳೆಯಾಗಲಿದ್ದು, ದೀಘ ಕಾಲೀನ ಸರಾಸರಿಯ ಶೇ.102ರಷ್ಟು ಅಂದರೆ ಜೂನ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟಾರೆ 868.6 ಮಿ.ಮೀ ಮಳೆಯಾಗುವ ಸಾಧ್ಯತೆಯಿದೆ ಎಂದು ಖಾಸಗಿ ಹವಾಮಾನ ಸಂಸ್ಥೆಯಾಗಿರುವ ಸ್ಕೈಮೇಟ್ ಅಂದಾಜಿಸಿದೆ.
ಅದರಲ್ಲೂ ಪ್ರಮುಖವಾಗಿ ದಕ್ಷಣ, ಪಶ್ಚಿಮ ಮತ್ತು ವಾಯವ್ಯ ಭಾಗಗಳಲ್ಲಿ ಉತ್ತಮ ಮಳೆಯಾಗಲಿದೆ. ಹಾಗೆಯೇ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಭಾಗಗಳಲ್ಲಿ ಸಮರ್ಪಕ ಮಳೆಯಾಗಲಿದೆ. ಆದರೆ ಜುಲೈ-ಆಗಸ್ಟ್ ಅವಧಿಯಲ್ಲಿ ಬಿಹಾರ, ಜಾರ್ಖಂಡ, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಮಳೆ ಕೊರತೆಯಾಗಲಿದೆ. ಹಾಗೂ ಈಶಾನ್ಯ ರಾಜ್ಯಗಳಿಗೆ ತುಸು ಕಡಿಮೆ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.