ನರೇಂದ್ರ ಮೋದಿ ಸರ್ಕಾರದ ಮಂತ್ರಿ ಪರಿಷತ್‌ ಸಭೆ ಬುಧವಾರ ಜರುಗಿತು. ಸಂಜೆ 4.30ಕ್ಕೆ ಆರಂಭವಾದ ಸಭೆ ರಾತ್ರಿಯವರೆಗೆ ನಡೆಯಿತು,

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಮಂತ್ರಿ ಪರಿಷತ್‌ ಸಭೆ ಬುಧವಾರ ಜರುಗಿತು. ಸಂಜೆ 4.30ಕ್ಕೆ ಆರಂಭವಾದ ಸಭೆ ರಾತ್ರಿಯವರೆಗೆ ನಡೆಯಿತು,

ಪಾಕಿಸ್ತಾನದ ಮೇಲಿನದ ಭಾರತದ ಆಪರೇಷನ್ ಸಿಂದೂರದ ಬಳಿಕ ಮೊದಲ ಸಭೆ ಇದಾಗಿತ್ತು. ಮೋದಿ ಮಂತ್ರಿಮಂಡಲದ ಎಲ್ಲ ಸದಸ್ಯರು (ಸಂಪುಟ+ರಾಜ್ಯ ಮಂತ್ರಿಗಳು) ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸಂಪುಟ ಸಹದ್ಯೋಗಿಗಳಿಗೆ ಆಪರೇಷನ್ ಸಿಂದೂರ ಕುರಿತು ಸಭೆಯಲ್ಲಿ ವಿವರಣೆ ನೀಡಿದರು. ಇದೇ ವೇಳೆ, ಮೋದಿ-3 ಸರ್ಕಾರಕ್ಕೆ ಜೂ.9ರಂದು 1 ವರ್ಷವಾಗಲಿರುವ ಕಾರಣ, ವರ್ಷಾಚರಣೆ ಹೇಗಿರಬೇಕು ಎಂಬ ರೂಪರೇಷೆಗಳನ್ನೂ ನಿರ್ಧರಿಸಲಾಯಿತು.