ಕರ್ನಾಟಕದ ಸೋಲಿಗರು, ಹುಲಿವೇಷಕ್ಕೆ, ಧಿನಿಧಿ ದೇಸಿಂಘು ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ

| N/A | Published : Feb 24 2025, 12:35 AM IST / Updated: Feb 24 2025, 05:19 AM IST

ಸಾರಾಂಶ

ಇತ್ತೀಚಿನ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 9 ಚಿನ್ನ ಸೇರಿ 11 ಪದಕ ಪಡೆದ ಕರ್ನಾಟಕದ ಈಜುಗಾರ್ತಿ ಧಿನಿಧಿ ದೇಸಿಂಘು ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ರಾಷ್ಟ್ರೀಯ ಕ್ರೀಡಾಕೂಟ ರೋಮಾಂಚಕಾರಿಯಾಗಿತ್ತು.

ನವದೆಹಲಿ: ಇತ್ತೀಚಿನ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 9 ಚಿನ್ನ ಸೇರಿ 11 ಪದಕ ಪಡೆದ ಕರ್ನಾಟಕದ ಈಜುಗಾರ್ತಿ ಧಿನಿಧಿ ದೇಸಿಂಘು ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ರಾಷ್ಟ್ರೀಯ ಕ್ರೀಡಾಕೂಟ ರೋಮಾಂಚಕಾರಿಯಾಗಿತ್ತು. ದೇಶಾದ್ಯಂತದ 11,000ಕ್ಕೂ ಹೆಚ್ಚು ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡಿದರು. ಕರ್ನಾಟಕದ ಈಜುಗಾರ್ತಿ ಧಿನಿಧಿ ದೇಸಿಂಘು ದೇಶವಾಸಿಗಳ ಹೃದಯ ಗೆದ್ದಿದ್ದಾರೆ. ಅವರು 3 ಹೊಸ ರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು’ ಎಂದರು.

 ‘ಕರ್ನಾಟಕದ ಬಿಳಿಗಿರಿ ರಂಗನ ಬೆಟ್ಟ (ಬಿಆರ್‌ಟಿ) ಹುಲಿ ಅಭಯಾರಣ್ಯದಲ್ಲಿ ಹುಲಿಗಳ ಜನಸಂಖ್ಯೆ ನಿರಂತರವಾಗಿ ಏರಿದೆ. ಇದಕ್ಕೆ ಹೆಚ್ಚಿನ ಮನ್ನಣೆ ಸಲ್ಲುವುದು ಹುಲಿಯನ್ನು ಪೂಜಿಸುವ ಸೋಲಿಗ ಬುಡಕಟ್ಟು ಜನಾಂಗಕ್ಕೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದಾರೆ.

ಭಾನುವಾರ ‘ಮಾಸಿಕ ಮನ್‌ ಕೀ ಬಾತ್‌’ ರೇಡಿಯೋ ಭಾಷಣ ಮಾಡಿದ ಮೋದಿ, ‘ಕಾಡು ಪ್ರಾಣಿಗಳು ನಮ್ಮ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಆಳವಾಗಿ ಹುದುಗಿವೆ. ಅನೇಕ ಪ್ರಾಣಿಗಳನ್ನು ನಮ್ಮ ದೇವರು ಮತ್ತು ದೇವತೆಗಳ ವಾಹನಗಳಾಗಿಯೂ ಆಚರಿಸಲಾಗುತ್ತದೆ. ಕರ್ನಾಟಕದ ಹುಲಿ ವೇಷ, ತಮಿಳುನಾಡಿನ ಪೂಲಿ ಮತ್ತು ಕೇರಳದ ಪುಲಿಕಲಿ ಮುಂತಾದ ಅನೇಕ ಸಾಂಸ್ಕೃತಿಕ ನೃತ್ಯಗಳು ನಮ್ಮಲ್ಲಿವೆ, ಅವು ಪ್ರಕೃತಿ ಮತ್ತು ವನ್ಯಜೀವಿಗಳೊಂದಿಗೆ ಸಂಬಂಧ ಹೊಂದಿವೆ’ ಎಂದರು.

‘ನನ್ನ ಬುಡಕಟ್ಟು ಸಹೋದರ ಸಹೋದರಿಯರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ, ಏಕೆಂದರೆ ಅವರು ವನ್ಯಜೀವಿ ರಕ್ಷಣೆಗೆ ಸಂಬಂಧಿಸಿದ ಕೆಲಸದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಕರ್ನಾಟಕದ ಬಿಆರ್‌ಟಿ ಹುಲಿ ಅಭಯಾರಣ್ಯದಲ್ಲಿ ಹುಲಿಗಳ ಜನಸಂಖ್ಯೆ ನಿರಂತರವಾಗಿ ಏರಿದೆ. ಇದಕ್ಕೆ ಹೆಚ್ಚಿನ ಮನ್ನಣೆ ಸಲ್ಲುವುದು ಹುಲಿಯನ್ನು ಪೂಜಿಸುವ ಸೋಲಿಗ ಬುಡಕಟ್ಟು ಜನಾಂಗಕ್ಕೆ. ಅವರ ಕಾರಣದಿಂದಾಗಿ, ಈ ಪ್ರದೇಶದಲ್ಲಿ ಮನುಷ್ಯ-ಪ್ರಾಣಿ ಸಂಘರ್ಷ ಬಹುತೇಕ ಇಲ್ಲ’ ಎಂದರು.

‘ಮಧ್ಯ ಭಾರತದ ಅನೇಕ ಬುಡಕಟ್ಟು ಜನಾಂಗದವರು ಬಾಗೇಶ್ವರನನ್ನು ಪೂಜಿಸುತ್ತಾರೆ. ಮಹಾರಾಷ್ಟ್ರದಲ್ಲಿ ವಾಘೋಬಾನನ್ನು ಪೂಜಿಸುವ ಸಂಪ್ರದಾಯವಿದೆ. ಭಗವಾನ್ ಅಯ್ಯಪ್ಪ ಹುಲಿಯೊಂದಿಗೆ ಬಹಳ ಆಳವಾದ ಸಂಪರ್ಕವನ್ನು ಹೊಂದಿದ್ದಾರೆ’ ಎಂದರು.

ಧಿನಿಧಿ ಬಗ್ಗೆ ಪ್ರಶಂಸೆ:

ನವದೆಹಲಿ: ಇತ್ತೀಚಿನ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 9 ಚಿನ್ನ ಸೇರಿ 11 ಪದಕ ಪಡೆದ ಕರ್ನಾಟಕದ ಈಜುಗಾರ್ತಿ ಧಿನಿಧಿ ದೇಸಿಂಘು ಅವರನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ.