ಸಾರಾಂಶ
ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಏರಿ ದಾಖಲೆ ನಿರ್ಮಿಸಿರುವ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಲೇ ಇದ್ದು, ವಿಶ್ವದ ಅತ್ಯಂತ ಜನಪ್ರಿಯ, ಪ್ರಜಾಪ್ರಭುತ್ವವಾದಿ ನಾಯಕ ಎಂಬ ಹಿರಿಮೆ ಮತ್ತೆ ಮೋದಿಯನ್ನು ಅರಸಿ ಬಂದಿದೆ.
ಶೇ.75ರಷ್ಟು ಜನರ ಮತ ಮೋದಿ ಪರನವದೆಹಲಿ: ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಏರಿ ದಾಖಲೆ ನಿರ್ಮಿಸಿರುವ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಲೇ ಇದ್ದು, ವಿಶ್ವದ ಅತ್ಯಂತ ಜನಪ್ರಿಯ, ಪ್ರಜಾಪ್ರಭುತ್ವವಾದಿ ನಾಯಕ ಎಂಬ ಹಿರಿಮೆ ಮತ್ತೆ ಮೋದಿಯನ್ನು ಅರಸಿ ಬಂದಿದೆ.
ಅಮೆರಿಕ ಮೂಲದ ಮಾರ್ನಿಂಗ್ ಕನ್ಸಲ್ಟೆಂಟ್ ಬಿಡುಗಡೆ ಮಾಡಿರುವ ಹೊಸ ಸಮೀಕ್ಷಾ ವರದಿ ಅನ್ವಯ ಶೇ.75ರಷ್ಟು ಅಪ್ರೂವಲ್ ರೇಟಿಂಗ್‌ನೊಂದಿಗೆ (ಅನುಮೋದನೆ), ಪ್ರಧಾನಿ ನರೇಂದ್ರ ಮೋದಿ ವಿಶ್ವದ ನಂ.1 ಅತ್ಯಂತ ಜನಪ್ರಿಯ ಪ್ರಜಾಸತಾತ್ಮಕ ನಾಯಕನಾಗಿ ಹೊರಹೊಮ್ಮಿದ್ದಾರೆ. ವಿಶ್ವದ ಪ್ರಮುಖ ಪ್ರಜಾಪ್ರಭುತ್ವ ದೇಶಗಳಲ್ಲಿ ಜು.4ರಿಂದ ಜು.10ರವರೆಗೆ ನಡೆಸಿದ ಸಮೀಕ್ಷೆಯಲ್ಲಿ ವ್ಯಕ್ತವಾದ ಅಂಶಗಳನ್ನು ಸಂಸ್ಥೆ ತನ್ನ ಹೊಸ ವರದಿಯಲ್ಲಿ ಪ್ರಕಟಿಸಿದೆ.ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ಶೇ.75ರಷ್ಟು ಜನರು ಮೋದಿಗೆ ಜೈಕಾರ ಹಾಕಿದ್ದರೆ ಶೇ.18ರಷ್ಟು ಜನರು ಅವರನ್ನು ತಿರಸ್ಕರಿಸಿದ್ದಾರೆ. ಶೇ.7ರಷ್ಟು ಜನರು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ.
ನಂತರದ ಸ್ಥಾನದಲ್ಲಿ ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಜೇ (ಶೇ.59), ಅರ್ಜೇಂಟೀನಾ ಅಧ್ಯಕ್ಷ ಜೇವಿಯಲ್ ಮಿಲಿ (ಶೇ.57), ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಆಲ್ಬನೀಸ್ (ಶೇ.54) ಸ್ಥಾನ ಪಡೆದಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ.44ರಷ್ಟು ಅಪ್ರೂವಲ್ ರೇಟಿಂಗ್‌ನೊಂದಿಗೆ 8ನೇ ಸ್ಥಾನದಲ್ಲಿದ್ದಾರೆ.