ಸ್ವಾತಂತ್ರ್ಯ ದಿನಾಚರಣೆಯಂದು ರಾಜಸ್ಥಾನಿ ಲೆಹರಿಯಾ ಪೇಟದಲ್ಲಿ ಮಿಂಚಿದ ಪ್ರಧಾನಿ ಮೋದಿ

| Published : Aug 16 2024, 12:58 AM IST / Updated: Aug 16 2024, 05:02 AM IST

ಸಾರಾಂಶ

ಪ್ರತಿ ವರ್ಷದಂತೆ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿ ಅವರು ಈ ಸಲ ಮತ್ತೊಂದು ರೋಮಾಂಚಕ ಪೇಟವನ್ನು ಧರಿಸಿ ಮುಂಚಿದರು. ಈ ಬಾರಿ, ಅವರು ತಮ್ಮ ಬಿಳಿ ಕುರ್ತಾ, ಚೂಡಿದಾರ್ ಮತ್ತು ನೀಲಿ ಬಂದ್‌ ಗಲಾ ಜಾಕೆಟ್ ಜತೆ ಬಹು-ಬಣ್ಣದ ರಾಜಸ್ಥಾನಿ ಲೆಹೆರಿಯಾ ಪ್ರಿಂಟ್ ಟರ್ಬನ್‌ ಧರಿಸಿ ಗಮನ ಸೆಳೆದರು.

ನವದೆಹಲಿ: ಪ್ರತಿ ವರ್ಷದಂತೆ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿ ಅವರು ಈ ಸಲ ಮತ್ತೊಂದು ರೋಮಾಂಚಕ ಪೇಟವನ್ನು ಧರಿಸಿ ಮುಂಚಿದರು. ಈ ಬಾರಿ, ಅವರು ತಮ್ಮ ಬಿಳಿ ಕುರ್ತಾ, ಚೂಡಿದಾರ್ ಮತ್ತು ನೀಲಿ ಬಂದ್‌ ಗಲಾ ಜಾಕೆಟ್ ಜತೆ ಬಹು-ಬಣ್ಣದ ರಾಜಸ್ಥಾನಿ ಲೆಹೆರಿಯಾ ಪ್ರಿಂಟ್ ಟರ್ಬನ್‌ ಧರಿಸಿ ಗಮನ ಸೆಳೆದರು.

ಲೆಹೆರಿಯಾ ರಾಜಸ್ಥಾನದ ಪ್ರಸಿದ್ಧ ಪಾರಂಪರಿಕ ಕರಕುಶಲ ಪೇಟವಾಗಿದ. ಈ ಪದವು " ಲೆಹೆರ್ " ನಿಂದ ಬಂದಿದೆ, ರಾಜಸ್ತಾನದ ಮರುಭೂಮಿ ಮರಳಿನಲ್ಲಿ ಬೀಸಿದಾಗ ಗಾಳಿಯು ಸೃಷ್ಟಿಸುವ ಅಲೆಗಳನ್ನು ಸೂಚಿಸುತ್ತದೆ.

ರಾಜಸ್ಥಾನದ ರಜಪೂತ ರಾಜರು ಇದನ್ನು 17ನೇ ಶತಮಾನದಿಂದ ಧರಿಸುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ. ನಂತರಮ ಮಾರ್ವಾಡಿಗಳೂ ಇದನ್ನು ಧರಿಸುತ್ತಿದ್ದರು. ನುರಿತ ಕುಶಲಕರ್ಮಿಗಳು ಲೆಹೆರಿಯಾ ಮುದ್ರಣಗಳನ್ನು ರಚಿಸಲು ಸಸ್ಯಗಳು ಮತ್ತು ಖನಿಜಗಳಿಂದ ನೈಸರ್ಗಿಕ ಬಣ್ಣಗಳನ್ನು ಬಳಸುತ್ತಾರೆ.

ಇಂದು, ಮಹಿಳೆಯರು ಮಾನ್ಸೂನ್ ಸಮಯದಲ್ಲಿ ಲೆಹೆರಿಯಾ ಸೀರೆಗಳನ್ನು ಧರಿಸುತ್ತಾರೆ. ಇದು ಉತ್ತಮ ಫಸಲು ನಿರೀಕ್ಷೆಯ ಸಂಕೇತ ಎಂದು ವರದಿಗಳು ಹೇಳುತ್ತವೆ.