ಇಮ್ರಾನ್‌ ಖಾನ್‌ ಅವರ ಆಪ್ತ ಮೊಹಮ್ಮದ್‌ ಖುರೇಷಿಗೆ ಚುನಾವಣೆಗೆ ನಿಲ್ಲದಂತೆ ನಿರ್ಬಂಧ ವಿಧಿಸಲಾಗಿದೆ.

ಇಸ್ಲಾಮಾಬಾದ್‌: ಹಲವು ಪ್ರಕರಣಗಳಲ್ಲಿ ಬಂಧಿಯಾಗಿರುವ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಆಪ್ತ ಪಿಟಿಐ ಪಕ್ಷದ ಮುಖಂಡ ಮಹಮೂದ್‌ ಖುರೇಷಿಗೆ ಚುನಾವಣಾ ಆಯೋಗ ಐದು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಹೇರಿದೆ.

ಅಧಿಕೃತ ಮಾಹಿತಿ ಸೋರಿಕೆ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಖುರೇಷಿ ಅವರು ಪಾಕಿಸ್ತಾನ ಸಂವಿಧಾನದ 63ನೇ ವಿಧಿ ಅಡಿಯಲ್ಲಿ ಅನರ್ಹಗೊಂಡಿದ್ದಾರೆ.

ಈ ಕಾರಣವಾಗಿ ಅವರು ಮುಂಬರುವ 2024 ಸಾರ್ವತ್ರಿಕ ಚುನಾವಣೆ ಹಾಗೂ ಇನ್ನು 5 ವರ್ಷ ಯಾವುದೇ ಚುನಾವಣೆಗಳಿಗೆ ಸ್ಪರ್ಧೆ ಮಾಡಬಾರದು ಎಂದು ಇಲ್ಲಿನ ಚುನಾವಣಾ ಆಯೋಗ ನಿರ್ಬಂಧ ಹೇರಿದೆ.

ಇದರಿಂದಾಗಿ ಇಮ್ರಾನ್‌ ಖಾನ್‌ ಅವರ ಪಕ್ಷ ಪಿಟಿಐಗೆ ಮತ್ತೊಂದು ಆಘಾತವಾಗಿದೆ.