ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ಗೆ ಮಧ್ಯಂತರ ಜಾಮೀನು

| Published : May 07 2024, 01:04 AM IST / Updated: May 07 2024, 09:39 AM IST

Naresh Goyal
ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ಗೆ ಮಧ್ಯಂತರ ಜಾಮೀನು
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ಗೆ ಬಾಂಬೆ ಹೈಕೋರ್ಟ್ 2 ತಿಂಗಳ ಕಾಲ ವೈದ್ಯಕೀಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ಗೆ ಬಾಂಬೆ ಹೈಕೋರ್ಟ್ 2 ತಿಂಗಳ ಕಾಲ ವೈದ್ಯಕೀಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಈ ಕುರಿv vತು ವಿಚಾರಣೆ ನಡೆಸಿದ ನ್ಯಾ ಜಮಾದಾರ್‌ ನೇತೃತ್ವದ ಪೀಠ, ‘ಗೋಯಲ್‌ ಹಾಗೂ ಪತ್ನಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ 2 ತಿಂಗಳ ಕಾಲ ವೈದ್ಯಕೀಯ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ. ಆದರೆ ಗೋಯಲ್‌ 1 ಲಕ್ಷ ರು. ಬಾಂಡ್‌ ಹಾಗೂ ತಮ್ಮ ಪಾಸ್‌ಪೋರ್ಟನ್ನು ಒತ್ತೆ ಇಡುವಂತೆ ಷರತ್ತು ವಿಧಿಸಲಾಗಿದೆ. ಅಲ್ಲದೆ ಪೂರ್ವಾನುಮತಿಯಿಲ್ಲದೆ ಗೋಯಲ್‌ ಮುಂಬೈ ನಗರ ಬಿಟ್ಟು ಹೊರ ಹೋಗುವಂತಿಲ್ಲ’ ಎಂದು ತೀರ್ಪು ನೀಡಿತು.

ಗೋಯಲ್‌ ಅವರ ವೈದ್ಯಕೀಯ ಜಾಮೀನು ಅರ್ಜಿಯನ್ನು ಈ ಹಿಂದೆ ಕೆಳ ನ್ಯಾಯಾಲಯ ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.