ಕೃಷಿ ಭೂಮಿಯಿಂದ ನಾಲ್ಕೇ ವರ್ಷದಲ್ಲೇ 50 ಲಕ್ಷ ಮರ ಮಾಯ

| Published : May 19 2024, 01:47 AM IST / Updated: May 19 2024, 06:09 AM IST

ಸಾರಾಂಶ

ಬದಲಾದ ಕೃಷಿ ಪದ್ಧತಿಯಿಂದಾಗಿ ಕೃಷಿ ಭೂಮಿಗಳಲ್ಲಿ ಬೆಳೆದು ನಿಂತಿದ್ದ 50 ಲಕ್ಷದಷ್ಟು ದೊಡ್ಡ ಮರಗಳು 2018 ಹಾಗೂ 2022ರ ನಡುವಣ ಅವಧಿಯಲ್ಲಿ ಭಾರತದಲ್ಲಿ ಕಣ್ಮರೆಯಾಗಿವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

 ನವದೆಹಲಿ :    ಬದಲಾದ ಕೃಷಿ ಪದ್ಧತಿಯಿಂದಾಗಿ ಕೃಷಿ ಭೂಮಿಗಳಲ್ಲಿ ಬೆಳೆದು ನಿಂತಿದ್ದ 50 ಲಕ್ಷದಷ್ಟು ದೊಡ್ಡ ಮರಗಳು 2018 ಹಾಗೂ 2022ರ ನಡುವಣ ಅವಧಿಯಲ್ಲಿ ಭಾರತದಲ್ಲಿ ಕಣ್ಮರೆಯಾಗಿವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಇದು ಕಳವಳಕ್ಕೆ ಕಾರಣವಾಗಿದೆ.

ಕೃಷಿ ಅರಣ್ಯಗಳ ಜಾಗದಲ್ಲಿ ಭತ್ತದ ಗದ್ದೆಗಳನ್ನು ಸೃಷ್ಟಿಸಲಾಗುತ್ತಿದೆ. ಇದರಿಂದಾಗಿ ಮರಗಳು ನಾಶವಾಗಿವೆ. ಇದರ ಜತೆಗೆ ನೈಸರ್ಗಿಕ ಕಾರಣಕ್ಕಾಗಿಯೂ ಒಂದಷ್ಟು ಮರಗಳು ಮಾಯವಾಗಿವೆ ಎಂದು ಜರ್ನಲ್‌ ನೇಚರ್‌ ಸಸ್ಟೇನಬಲಿಟಿಯಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ ತಿಳಿಸಿದೆ.

ಕೃಷಿ ಭೂಮಿಯಲ್ಲಿದ್ದ ಮರಗಳಿಂದ ಹೆಚ್ಚು ಅನುಕೂಲವಾಗುತ್ತಿಲ್ಲ. ಬೆಳೆಗಳ ಮೇಲೆ ಅದರ ನೆರಳು ಬೀಳುತ್ತಿರುವ ಕಾರಣ ಮರಗಳನ್ನು ಕಡಿಯಲಾಗುತ್ತಿದೆ. ಕೃಷಿ ಅರಣ್ಯದಲ್ಲಿದ್ದ ದೊಡ್ಡ ಹಾಗೂ ಬಲಿತ ಮರಗಳನ್ನು ತೆಗೆದು ಹಾಕಲಾಗಿದೆ. ರೈತರು ಬೇರೊಂದು ಜಾಗದಲ್ಲಿ ಮರ ನೆಡುತ್ತಿದ್ದಾರೆ. ಅವುಗಳಿಂದ ಪರಿಸರಕ್ಕೆ ಹೆಚ್ಚು ಮೌಲ್ಯವಿಲ್ಲ ಎಂದು ಡೆನ್ಮಾರ್ಕ್‌ನ ಕೊಪೇನ್‌ಹೇಗನ್‌ನ ಸಂಶೋಧಕರನ್ನೂ ಒಳಗೊಂಡ ತಂಡದ ಅಧ್ಯಯನ ವರದಿ ತಿಳಿಸಿದೆ.