ಸಾರಾಂಶ
ಪಹಲ್ಗಾಂ ದಾಳಿ ಬಳಿಕ ಭಾರತ ವೀಸಾ ಸ್ಥಗಿತಗೊಳಿಸಿರುವ ಕಾರಣ ಭಾರತದಲ್ಲಿ ನೆಲೆಸಿದ್ದ ಪಾಕಿಸ್ತಾನೀಯರು ತಮ್ಮ ತವರಿಗೆ ಹಿಂದಿರುಗುತ್ತಿದ್ದು, ಕಾಶ್ಮೀರದಲ್ಲಿ ಪಾಕ್‌ಗೆ ಗಡೀಪಾರು ಭೀತಿ ಎದುರಿಸಿದ್ದ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಪೊಲೀಸ್ ಪೇದೆ ತಾಯಿಯನ್ನು ಈ ಕ್ರಮದಿಂದ ಕೈಬಿಡಲಾಗಿದೆ.
ನವದೆಹಲಿ: ಪಹಲ್ಗಾಂ ದಾಳಿ ಬಳಿಕ ಭಾರತ ವೀಸಾ ಸ್ಥಗಿತಗೊಳಿಸಿರುವ ಕಾರಣ ಭಾರತದಲ್ಲಿ ನೆಲೆಸಿದ್ದ ಪಾಕಿಸ್ತಾನೀಯರು ತಮ್ಮ ತವರಿಗೆ ಹಿಂದಿರುಗುತ್ತಿದ್ದು, ಕಾಶ್ಮೀರದಲ್ಲಿ ಪಾಕ್‌ಗೆ ಗಡೀಪಾರು ಭೀತಿ ಎದುರಿಸಿದ್ದ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಪೊಲೀಸ್ ಪೇದೆ ತಾಯಿಯನ್ನು ಈ ಕ್ರಮದಿಂದ ಕೈಬಿಡಲಾಗಿದೆ.
ಕೇಂದ್ರ ಸರ್ಕಾರದ ಬಿಗಿ ನಿಲುವಿನ ಕಾರಣದಿಂದಾಗಿ ಕಾಶ್ಮೀರದಿಂದ 60 ಪಾಕಿಸ್ತಾನಿಯರನ್ನು ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ಮರಳಿ ಕಳುಹಿಸಲಾಗಿದೆ. ಅದರಲ್ಲಿ 2022ರ ಮೇನಲ್ಲಿ ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ್ದ. ಮರಣೋತ್ತರ ಶೌರ್ಯ ಪ್ರಶಸ್ತಿ ಪಡೆದಿದ್ದ ಪೊಲೀಸ್ ಪೇದೆ ಮುದಾಸಿರ್ ಅಹ್ಮದ್ ಶೇಖ್ ತಾಯಿ ಶಮೀಮಾ ಅಖ್ತರ್ ಅವರು ಕೂಡ ಗಡೀಪಾರು ಕ್ರಮಕ್ಕೆ ಒಳಗಾಗಿದ್ದರು. ಆದರೆ ಸರ್ಕಾರ ಅವರನ್ನು ಇಲ್ಲಿಯೇ ಇರಲು ಅನುಮತಿ ನೀಡಿದ್ದು, ಶಮೀಮಾ ಮನೆಗೆ ಮರಳಿದ್ದಾರೆ. 1990ರಲ್ಲಿ ಕಣಿವೆ ರಾಜ್ಯದಲ್ಲಿ ಉಗ್ರಗಾಮಿ ಚಟುವಟಿಕೆಗಳು ಭುಗಿಲೇಳುವುದಕ್ಕೂ ಮುನ್ನವೇ ಶಮೀಮಾ ಕಾಶ್ಮೀರ ವ್ಯಕ್ತಿಯನ್ನು ಮದುವೆಯಾಗಿದ್ದರು.