ಸಾರಾಂಶ
ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಉಗ್ರರು ಅಥವಾ ಸಮಾಜಘಾತುಕರು ದಾಳಿ ನಡೆಸುವ ಶಂಕೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಹಾರಾಷ್ಟ್ರದ ಮುಂಬೈ ನಗರದಾದ್ಯಂತ 30 ದಿನಗಳವರೆಗೆ ಸೆಕ್ಷನ್ 144 ಜಾರಿ.
ಮುಂಬೈ: ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಉಗ್ರರು ಅಥವಾ ಸಮಾಜಘಾತುಕರು ದಾಳಿ ನಡೆಸುವ ಶಂಕೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಹಾರಾಷ್ಟ್ರದ ಮುಂಬೈ ನಗರದಾದ್ಯಂತ 30 ದಿನಗಳವರೆಗೆ ಸೆಕ್ಷನ್ 144 ಜಾರಿ ಮಾಡಲಾಗಿದೆ. ಡಿ.20, 2023ರಿಂದ ಜ.18, 2024ರವರೆಗೆ ಒಂದು ತಿಂಗಳ ಕಾಲ ನಗರದಲ್ಲಿ ಡ್ರೋನ್‌ಗಳು, ಹಾಟ್ ಏರ್ ಬಲೂನ್‌ಗಳು, ರಿಮೋಟ್ ಕಂಟ್ರೋಲಿಂಗ್ ಹಾರಾಟ ವಸ್ತುಗಳು ಸೇರಿದಂತೆ ಆಕಾಶದಲ್ಲಿ ಯಾವುದೇ ವಸ್ತುಗಳ ಹಾರಾಟವನ್ನು ಮುಂಬೈ ಪೊಲೀಸರು ನಿಷೇಧಿಸಿದ್ದಾರೆ. ನಗರದಲ್ಲಿ ಭಾರೀ ವಿಜೃಂಭಣೆಯಿಂದ ಹೊಸ ವರ್ಷಾಚರಣೆ ಆಚರಿಸಲಾಗುತ್ತದೆ. ದೇಶ ವಿರೋಧಿ ಚಟುವಟಿಕೆಗಳಿಗೆ ಇದು ಉಪಯೋಗಬಾರದು ಎಂದು ಈ ಕ್ರಮ ಕೈಗೊಳ್ಳಲಾಗಿದೆ.