ಸಾರಾಂಶ
ಪಣಜಿ: ‘ಹೆಣ್ಣು ಮಕ್ಕಳ ರೀತಿ ನಡೆಯುತ್ತಿದ್ದಾರೆ ಎನ್ನುವ ಕಾರಣಕ್ಕೆ ಜನರು ನಮ್ಮ ತಂದೆಯನ್ನು ಟೀಕೆ ಮಾಡುತ್ತಿದ್ದರು. ಈ ನಿಂದನೆಗಳಿಗೆ ಬೆದರಿ ತಂದೆ ಆತ್ಮಹತ್ಯೆಗೆ ಯತ್ನಿಸಿದ್ದರು’ ಎಂದು ನಟ ನಾಗಾರ್ಜುನ ತಮ್ಮ ತಂದೆ ಅಕ್ಕಿನೇನಿ ನಾಗೇಶ್ವರ್ ರಾವ್ ಕುರಿತಾದ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ.
ಭಾರತೀಯ ಅಂತರಾಷ್ಟ್ರೀಯ ಚಲಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ವೇಳೆ ನಟ ನಾಗಾರ್ಜುನ ಈ ಕುರಿತು ಮಾತನಾಡುತ್ತಿದ್ದರು. ‘ಆ ಸಮಯದಲ್ಲಿ ಮಹಿಳೆಯರು ನಟರಾಗಲು ಮತ್ತು ವೇದಿಕೆ ಹತ್ತುವ ಅವಕಾಶಗಳು ಇರಲಿಲ್ಲ. ಹೀಗಾಗಿ ಅವರು ಹೆಣ್ಣುಮಕ್ಕಳ ಪಾತ್ರವನ್ನು ಮಾಡುವುದಕ್ಕೆ ಆರಂಭಿಸಿದರು.
ಅವರು ವೇದಿಕೆಯಲ್ಲಿ ಮೊದಲು ನಟಿಯಾಗಿದ್ದರು. ಅವರು ಸೊಂಟ ತಿರುಗಿಸುತ್ತಿರುವುದನ್ನು ನಾನು ನೋಡಿದ್ದೇನೆ. ಅವರು ಅದನ್ನು ವೇದಿಕೆಯಲ್ಲಿ ಮಾಡುತ್ತಿದ್ದ ನಟನೆ ಎಂದು ಭಾವಿಸುತ್ತಿದ್ದರು. ಜನರು ಅದನ್ನು ಟೀಕಿಸುತ್ತಿದ್ದರು. ಅದರಿಂದ ಅವರು ನೊಂದುಕೊಳ್ಳುತ್ತಿದ್ದರು. ಮರೀನಾ ಬೀಚ್‌ಗೆ ಹೋದಾಗ ಸಾಯಬೇಕು ಎಂದಿದ್ದರು. ಅಲ್ಲಿ ಅಪಹಾಸ್ಯ ನಿಂದನೆ ಎಲ್ಲವೂ ಇತ್ತು. ನೀರಿನಲ್ಲಿ ಮುಳುಗಿ ಸಾಯಲು ಹೋಗಿದ್ದರು. ಆ ಬಳಿಕ ಬೇಡವೆನಿಸಿ ಹಿಂದಿರುಗಿ ಬಂದಿದ್ದರು’ ಎಂದು ಹೇಳಿದರು.