ಸ್ವಾತಂತ್ರ್ಯೋತ್ಸವ : 127 ಶೌರ್ಯ, 40 ವಿಶಿಷ್ಟ ಸೇವಾ ಪದಕ ಪ್ರಕಟ

| N/A | Published : Aug 15 2025, 01:00 AM IST

ಸ್ವಾತಂತ್ರ್ಯೋತ್ಸವ : 127 ಶೌರ್ಯ, 40 ವಿಶಿಷ್ಟ ಸೇವಾ ಪದಕ ಪ್ರಕಟ
Share this Article
  • FB
  • TW
  • Linkdin
  • Email

ಸಾರಾಂಶ

ಪಹಲ್ಗಾಂ ಉಗ್ರ ದಾಳಿಗೆ ಪ್ರತೀಕವಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರದ ವೇಳೆ ಭಾಗಿಯಾಗಿದ್ದ 16 ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಯೋಧರಿಗೆ ಕೇಂದ್ರ ಸರ್ಕಾರ ಸ್ವಾತಂತ್ರ್ಯೋತ್ಸವಕ್ಕೆ ಮುನ್ನಾ ದಿನ ಶೌರ್ಯ ಪ್ರಶಸ್ತಿಯನ್ನು ಘೋಷಿಸಿದೆ.

 ನವದೆಹಲಿ :  ಪಹಲ್ಗಾಂ ಉಗ್ರ ದಾಳಿಗೆ ಪ್ರತೀಕವಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರದ ವೇಳೆ ಭಾಗಿಯಾಗಿದ್ದ 16 ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಯೋಧರಿಗೆ ಕೇಂದ್ರ ಸರ್ಕಾರ ಸ್ವಾತಂತ್ರ್ಯೋತ್ಸವಕ್ಕೆ ಮುನ್ನಾ ದಿನ ಶೌರ್ಯ ಪ್ರಶಸ್ತಿಯನ್ನು ಘೋಷಿಸಿದೆ. ಇದೇ ವೇಳೆ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಿಗೆ 127 ಶೌರ್ಯ ಪ್ರಶಸ್ತಿ ಮತ್ತು 40 ವಿಶಿಷ್ಟ ಸೇವೆ ಪದಕಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕರಿಸಿದ್ದಾರೆ.

1090 ಪೊಲೀಸ್‌ ಪದಕ ಘೋಷಣೆ:

ಈ ಬಾರಿ 1090 ಪೊಲೀಸ್‌ ಪದಕವನ್ನು ಘೋಷಿಸಲಾಗಿದೆ. ಈ ಪೈಕಿ 233 ಶೌರ್ಯ ಪದಕ, 99 ವಿಶಿಷ್ಠ ಸೇವೆಗಾಗಿ ರಾಷ್ಟ್ರಪತಿ ಪದಕ, 758 ಅತ್ಯುತ್ತಮ ಸೇವೆಗಾಗಿ ಪದಕಗಳನ್ನು ಘೋಷಿಸಲಾಗಿದೆ. 233 ಶೌರ್ಯ ಪದಕದಲ್ಲಿ 152 ಜಮ್ಮು ಕಾಶ್ಮೀರದ ಪೊಲೀಸರು ಭಾಜನರಾಗಿದ್ದಾರೆ. 54 ನಕ್ಸಲ್‌ ನಿಗ್ರಹ ಪಡೆಯವರು ಭಾಜನರಾಗಿದ್ದಾರೆ.

ಉಗ್ರರ ವಿರುದ್ಧದ ಹೋರಾಟಕ್ಕೆ ಸಿಂದೂರ ಚಾರಿತ್ರಿಕ ಉದಾಹರಣೆ : ಮುರ್ಮು

ನವದೆಹಲಿ: ಪಹಲ್ಗಾಂ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರವು ದೇಶದ ಉಗ್ರವಾದದ ವಿರುದ್ಧ ಹೋರಾಟಕ್ಕೆ ಒಂದು ಐತಿಹಾಸಿಕ ಉದಾಹರಣೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗುರುವಾರ ಸಂಜೆ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ‘ಆಪರೇಷನ್ ಸಿಂದೂರ ಜಾಗತಿಕವಾಗಿ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಮುಖ್ಯ ಮೈಲಿಗಲ್ಲು. ಭಾರತದ ಸಶಸ್ತ್ರ ಪಡೆಗಳು ದೃಢ ನಿರ್ಧಾರದಿಂದ ಗಡಿಯಾಚೆಗಿನ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿವೆ. ನನ್ನ ಪ್ರಕಾರ ಇದು ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಐತಿಹಾಸಿಕ ಉದಾಹರಣೆ’ ಎಂದರು.ಇದೇ ವೇಳೆ ಅವರು, ‘ಭಾರತ ಆಕ್ರಮಣ ಮಾಡಲು ಬಯಸುವುದಿಲ್ಲ ಎಂಬುದು ಜಗತ್ತು ಗೊತ್ತಾಗಿದೆ. ಇದರ ಜೊತೆಗೆ ನಮ್ಮ ನಾಗರಿಕರ ರಕ್ಷಣೆಗಾಗಿ ಪ್ರತೀಕಾರ ತೀರಿಸಿಕೊಳ್ಳಲು ಹಿಂಜರಿಯುವುದಿಲ್ಲ ಎಂಬ ನಮ್ಮ ನಿಲುವನ್ನು ಜಗತ್ತು ಗಮನಿಸಿದೆ’ ಎಂದರು.

ಛತ್ತೀಸ್‌ಗಡ 14 ಹಳ್ಳಿಗಳಲ್ಲಿ ಮೊದಲ ಸಲ ಧ್ವಜಾರೋಹಣ

ನಕ್ಸಲ್ ಹಾವಳಿಯಿಂದ ಮುಕ್ತವಾಗಿರುವ ಛತ್ತೀಸ್‌ಗಢದ 14 ಹಳ್ಳಿಗಳಲ್ಲಿ ಇದೇ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಲಿದೆ. 79 ವರ್ಷಗಳಲ್ಲಿ ಮೊದಲ ಸಲ ಬಿಜಾಪುರ, ನಾರಾಯಣಪುರ, ಸುಕ್ಮಾ ಜಿಲ್ಲೆಯ 14 ಹಳ್ಳಿಯ ಜನರು ಸ್ವಾತಂತ್ರ್ಯ ದಿನ ಆಚರಿಸಲು ನಿರ್ಧರಿಸಿದ್ದಾರೆ. ಇದರ ಜೊತೆಗೆ ಈ ವರ್ಷ ಮೊದಲ ಗಣರಾಜ್ಯೋತ್ಸವ ಆಚರಿಸಿದ್ದ 15 ಜಿಲ್ಲೆಗಳಲ್ಲೂ ಧ್ವಜ ಹಾರಲಿದೆ.

ಪಹಲ್ಗಾಂ ಬಳಿಕ ಕಾಶ್ಮೀರದಲ್ಲಿ ಮೊದಲ ಸ್ವಾತಂತ್ರ್ಯ ದಿನ: ಭಾರಿ ಭದ್ರತೆ

ಪಿಟಿಐ ಜಮ್ಮುಏ.26ರ ಪಹಲ್ಗಾಂ ದಾಳಿ ಬಳಿಕ ಮೊದಲ ಸ್ವಾತಂತ್ರ್ಯ ದಿನ ಜಮ್ಮು-ಕಾಶ್ಮೀರದಲ್ಲಿ ಆ.15ರಂದು ಮೊದಲ ಬಾರಿ ನಡೆಯುತ್ತಿದೆ. ಹೀಗಾಗಿ ಎಲ್ಲೆಡೆ ಭಾರಿ ಬಿಗಿ ಭದ್ರತೆ ಒದಗಿಸಲಾಗಿದೆ.

ಬಿಎಸ್‌ಎಫ್‌, ಸೇನೆ ಸೇರಿದಂತೆ ಜಮ್ಮು ಕಾಶ್ಮೀರ ಪೊಲೀಸರು ಮತ್ತು ಅರೆಸೇನಾ ಪಡೆಗಳು ಹದ್ದಿನ ಕಣ್ಣಿರಿಸಿದ್ದು, ತಪಾಸಣೆಯನ್ನು ತೀವ್ರಗೊಳಿಸಿವೆ. ಅಂತಾರಾಷ್ಟ್ರೀಯ ಗಡಿ (ಐಬಿ) ಮತ್ತು ಗಡಿ ನಿಯಂತ್ರಣಾ ರೇಖೆ (ಎಲ್‌ಓಸಿ) ಬಳಿ ಭದ್ರತೆ ಹೆಚ್ಚಿಸಲಾಗಿದೆ.ಜಮ್ಮು ನಗರದ ಪ್ರತಿ ರಸ್ತೆಗಳಲ್ಲಿಯೂ ವಾಹನ ತಪಾಸಣೆಗಳು ಜೋರಾಗಿ ನಡೆಯುತ್ತಿದ್ದು, ತುರ್ತು ಪ್ರತಿಕ್ರಿಯೆ ಪಡೆಗಳನ್ನು ನಿಯೋಜಿಸಲಾಗಿದೆ. ಶ್ರೀನಗರ-ಜಮ್ಮು, ಜಮ್ಮು-ಪಠಾಣ್‌ಕೋಟ್‌ ಹೆದ್ದಾರಿಗಳಲ್ಲಿಯೂ ನಿಗಾ ಇರಿಸಲಾಗಿದೆ. ಜಮ್ಮು ಪ್ರಾಂತ್ಯದ ಎಲ್ಲಾ ಜಿಲ್ಲೆಗಳಲ್ಲಿ, ಸೂಕ್ಷ್ಮ ಪ್ರದೇಶಗಳಲ್ಲಿಯೂ ಸಹ ಸೇನಾ ಪಡೆಗಳ ನಿಯೋಜನೆ ಮಾಡಲಾಗಿದೆ.

Read more Articles on