ಇಂಡೋನೇಷ್ಯಾ ರೀತಿ ಭಾರತದಜತೆಗೂ ಟ್ರೇಡ್‌ ಡೀಲ್‌: ಟ್ರಂಪ್

| Published : Jul 17 2025, 12:30 AM IST

ಸಾರಾಂಶ

ಭಾರತದೊಂದಿಗೆ ಪ್ರಸ್ತಾವಿತ ವ್ಯಾಪಾರ ಒಪ್ಪಂದವು ಅಮೆರಿಕ ಮಂಗಳವಾರ ಇಂಡೋನೇಷ್ಯಾದೊಂದಿಗೆ ಅಂತಿಮಗೊಳಿಸಿದ ಒಪ್ಪಂದದಂತೆಯೇ ಇರುತ್ತದೆ. ಶೀಘ್ರ ಅದು ಸಾಕಾರಗೊಳ್ಳುವ ನಿರೀಕ್ಷೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

- ಅಮೆರಿಕ ಉತ್ಪನ್ನಗಳ ಮೇಲಿನ ತೆರಿಗೆ ಭಾರೀ ಇಳಿಕೆ?- ಹಲವು ಷರತ್ತು ಹಾಕಿ ಇಂಡೋನೇಷ್ಯಾ ಜೊತೆ ಅಮೆರಿಕ ಡೀಲ್‌

===ಏನಿದು ಇಂಡೋನೇಷ್ಯಾ ಮಾದರಿ?ಅಮೆರಿಕದ ಉತ್ಪನ್ನಗಳಿಗೆ ಇಂಡೋನೇಷ್ಯಾದ ಮಾರುಕಟ್ಟೆ ಸಂಪೂರ್ಣ ಮುಕ್ತಇಂಡೋನೇಷ್ಯಾದ ಸರಕುಗಳಿಗೆ ಅಮೆರಿಕದಲ್ಲಿ ಶೇ.19ರಷ್ಟು ಸುಂಕ ಪ್ರಸ್ತಾಪಅಮೆರಿಕ ಕೃಷಿ ಉತ್ಪನ್ನ, ಬೋಯಿಂಗ್‌ ವಿಮಾನ ಖರೀದಿಯ ಪೂರ್ವ ಷರತ್ತುಇಂಡೋನೇಷ್ಯಾ ಒಪ್ಪಂದದ ಅಂಶ ಮುರಿದರೆ ಅಮೆರಿಕದಿಂದ ಹೆಚ್ಚಿನ ತೆರಿಗೆಇದೇ ಮಾದರಿ ಒಪ್ಪಂದ ಭಾರತದ ಜೊತೆಗೂ ಆದರೆ ಭಾರತಕ್ಕೆ ಹಾನಿ ಸಾಧ್ಯತೆ==ಪಿಟಿಐ ನವದೆಹಲಿ/ವಾಷಿಂಗ್ಟನ್‌ಭಾರತದೊಂದಿಗೆ ಪ್ರಸ್ತಾವಿತ ವ್ಯಾಪಾರ ಒಪ್ಪಂದವು ಅಮೆರಿಕ ಮಂಗಳವಾರ ಇಂಡೋನೇಷ್ಯಾದೊಂದಿಗೆ ಅಂತಿಮಗೊಳಿಸಿದ ಒಪ್ಪಂದದಂತೆಯೇ ಇರುತ್ತದೆ. ಶೀಘ್ರ ಅದು ಸಾಕಾರಗೊಳ್ಳುವ ನಿರೀಕ್ಷೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.ಅಮೆರಿಕ-ಇಂಡೋನೇಷ್ಯಾ ವ್ಯಾಪಾರ ಒಪ್ಪಂದದ ಪ್ರಕಾರ, ಇಂಡೋನೇಷ್ಯಾ ಮಾರುಕಟ್ಟೆಯು ಅಮೆರಿಕದ ಉತ್ಪನ್ನಗಳಿಗೆ ಸಂಪೂರ್ಣ ಮುಕ್ತವಾಗಿರುತ್ತದೆ. ಇಂಡೋನೇಷ್ಯಾ ಸರಕುಗಳಿಗೆ ಅಮೆರಿಕದಲ್ಲಿ ಶೇ.19ರಷ್ಟು ಸುಂಕ ವಿಧಿಸಲಾಗುತ್ತದೆ. ಇದಲ್ಲದೆ, ಇಂಡೋನೇಷ್ಯಾವು ಅಮೆರಿಕದಿಂದ 12.9 ಲಕ್ಷ ಕೋಟಿ ರು. ಮೌಲ್ಯದ ಇಂಧನ, 39 ಸಾವಿರ ಕೋಟಿ ರು. ಮೌಲ್ಯದ ಕೃಷಿ ಉತ್ಪನ್ನಗಳು ಹಾಗೂ 50 ಬೋಯಿಂಗ್ ಜೆಟ್‌ಗಳನ್ನು ಖರೀದಿಸಬೇಕು. ಇದೇ ನಿಯಮ ಭಾರತಕ್ಕೂ ಅನ್ವಯ ಆಗಬೇಕು ಎಂಬ ಪ್ರಸ್ತಾಪವಿದೆ ಎಂದು ಟ್ರಂಪ್ ತಿಳಿಸಿದ್ದಾರೆ.ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಏರ್ಪಡುವಿಕೆಗೆ ಅಮೆರಿಕದ ಕೆಲ ಷರತ್ತುಗಳು ಅಡ್ಡಿ ಆಗಿವೆ. ಕುಲಾಂತರಿ ತಳಿ ಉತ್ಪನ್ನಗಳು ಹಾಗೂ ಕೆಲವು ಡೈರಿ ಉತ್ಪನ್ನಗಳನ್ನು ಭಾರತ ತನ್ನಿಂದ ಖರಿದಿಸಬೇಕು ಎಂಬುದು ಅಮೆರಿಕದ ಷರತ್ತು. ಆದರೆ ಇದು ಭಾರತಕ್ಕೆ ಒಪ್ಪಿತವಾಗುತ್ತಿಲ್ಲ. ಹೀಗಾಗಿ ಈ ಹಿಂದಿನ ಜು.9ರ ಗಡುವು ಮುಗಿದರೂ ಒಪ್ಪಂದ ಏರ್ಪಟ್ಟಿಲ್ಲ. ಹೊಸ ಆ.1ರ ಗಡುವಿನೊಳಗೆ ಒಪ್ಪಂದ ಏರ್ಪಡುವ ನಿರೀಕ್ಷೆ ಇದೆ.ಆದರೆ ಅಮೆರಿಕಕ್ಕೆ ಇಂಡೋನೇಷ್ಯಾ ಯಾವುದೇ ಷರತ್ತು ವಿಧಿಸಿಲ್ಲ. ಇಂಡೋನೇಷ್ಯಾಗೆ ಎಲ್ಲ ಉತ್ಪನ್ನ ರಫ್ತು ಮಾಡುವ ಅಧಿಕಾರ ಅಮೆರಿಕಕ್ಕೆ ಈಗ ಲಭಿಸಿದೆ. ಹೀಗಾಗಿ ಇದನ್ನೇ ಸಮೀಕರಿಸಿ ಭಾರತದ ಬಗ್ಗೆ ಟ್ರಂಪ್‌ ನೀಡಿರುವ ಹೇಳಿಕೆ ಈಗ ಕುತೂಹಲ ಮೂಡಿಸಿದೆ.ಈ ಹಿಂದೆ ಟ್ರಂಪ್ ಭಾರತದ ಮೇಲೆ ಶೇ.26 ಪ್ರತಿತೆರಿಗೆ ವಿಧಿಸಿ ಸುದ್ದಿ ಮಾಡಿದ್ದರು. ಬಳಿಕ ಈ ತೆರಿಗೆಗೆ ಜು.9ರವರೆಗೆ ತಡೆ ವಿಧಿಸಿದ್ದರು. ಬಳಿಕ ಆ.1ರಕ್ಕೆ ಗಡುವು ವಿಸ್ತರಿಸಿದ್ದರು.