ನೀಟ್‌ ಕೌನ್ಸೆಲಿಂಗ್ ಮುಂದಕ್ಕೆ: ಮಾಸಾಂತ್ಯಕ್ಕೆ ನಡೆವ ಸಾಧ್ಯತೆ

| Published : Jul 07 2024, 01:17 AM IST / Updated: Jul 07 2024, 05:52 AM IST

ನೀಟ್‌ ಕೌನ್ಸೆಲಿಂಗ್ ಮುಂದಕ್ಕೆ: ಮಾಸಾಂತ್ಯಕ್ಕೆ ನಡೆವ ಸಾಧ್ಯತೆ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ರಮಗಳ ಸದ್ದಿನ ನಡುವೆಯೇ ನೀಟ್-ಯುಜಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಜುಲೈ ಮೊದಲ ವಾರದಲ್ಲಿ ಕೌನ್ಸೆಲಿಂಗ್ ಪ್ರಾರಂಭಗೊಳ್ಳಬಹುದು ಎಂದು ಅಂದಾಜಿಸಲಾಗಿತ್ತು.

ನವದೆಹಲಿ: ಅಕ್ರಮಗಳ ಸದ್ದಿನ ನಡುವೆಯೇ ನೀಟ್-ಯುಜಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಜುಲೈ ಮೊದಲ ವಾರದಲ್ಲಿ ಕೌನ್ಸೆಲಿಂಗ್ ಪ್ರಾರಂಭಗೊಳ್ಳಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿದ್ದು ಈ ತಿಂಗಳ ಅಂತ್ಯಕ್ಕೆ ಕೌನ್ಸೆಲಿಂಗ್ ಪ್ರಾರಂಭವಾಗುವ ಸಾಧ್ಯತೆಯಿದೆ.

‘ಇಲ್ಲಿಯವರೆಗೆ ಶಿಕ್ಷಣ ಸಚಿವಾಲಯ ಯಾವುದೇ ದಿನಾಂಕವನ್ನು ಘೋಷಣೆ ಮಾಡಿಲ್ಲ. ಹೀಗಾಗಿ ಈ ತಿಂಗಳ ಅಂತ್ಯಕ್ಕೆ ದಿನಾಂಕ ನಿಗದಿ ಆಗುವ ಸಾಧ್ಯತೆಯಿದೆ’ ಮೂಲಗಳು ಮಾಹಿತಿ ನೀಡಿವೆ.

‘ಕೆಲವು ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿದೆ. ಹೆಚ್ಚುವರಿ ಸೀಟುಗಳು ಸೇಪರ್ಡೆಯಾಗುವ ಸಾಧ್ಯತೆಯೂ ಇದೆ. ಹೊಸ ಕಾಲೇಜುಗಳಲ್ಲಿ ಮೊದಲ ಸುತ್ತಿನಲ್ಲಿ ಸೀಟ್‌ಗಳನ್ನು ಪಡೆಯಬಹುದೆಂದು ಖಾತರಿಯಾದ ಬಳಿಕ ದಿನಾಂಕವನ್ನು ಪ್ರಕಟಿಸಲಾಗುತ್ತದೆ’ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಈ ಎಲ್ಲ ಪ್ರಕ್ರಿಯೆ ಮುಗಿದು ಜುಲೈ ಅಂತ್ಯಕ್ಕೆ ಕೌನ್ಸೆಲಿಂಗ್ ಪ್ರಾರಂಭವಾಗುವ ಸಾಧ್ಯತೆಯಿದೆ.ಕಳೆದ ತಿಂಗಳು ಸುಪ್ರೀಂಕೋರ್ಟ್‌ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಮುಂದೂಡುವಂತೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತಿರಸ್ಕರಿಸಿ. ಪ್ರಕ್ರಿಯೆ ಮುಂದೂಡಲು ನಿರಾಕರಿಸಿತ್ತು.

==

ವಿವಾದಿತ ನೀಟ್‌-ಯುಜಿ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹ ಜೋರಾಗುತ್ತಿರುವ ನಡುವೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಇದರಿಂದ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಪರೀಕ್ಷೆ ರದ್ದುಗೊಳಿಸಲಾಗುವುದಿಲ್ಲ ಎಂದಿದು ಕೋರ್ಟ್‌ಗೆ ಎನ್‌ಟಿಎ ಶುಕ್ರವಾರ ಸ್ಪಷ್ಟ ಪಡಿಸಿತ್ತು.