ಲಿಖಿತ ರೂಪದಲ್ಲಿಯೇ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್‌ ಯುಜಿ ಪರೀಕ್ಷೆ ಮುಂದುವರಿಕೆ

| Published : Jan 17 2025, 12:46 AM IST / Updated: Jan 17 2025, 04:51 AM IST

ಸಾರಾಂಶ

 ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್‌- ಯುಜಿ ಪರೀಕ್ಷೆಯನ್ನು ಲಿಖಿತ ಪರೀಕ್ಷೆ ಕ್ರಮದಲ್ಲಿಯೇ ನಡೆಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಹೇಳಿದೆ.

ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್‌- ಯುಜಿ ಪರೀಕ್ಷೆಯನ್ನು ಲಿಖಿತ ಪರೀಕ್ಷೆ ಕ್ರಮದಲ್ಲಿಯೇ ನಡೆಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಹೇಳಿದೆ.

ನೀಟ್‌ ಯುಜಿ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸಬೇಕೆ ಅಥವಾ ಲಿಖಿತ ಪರೀಕ್ಷೆಯಲ್ಲಿ ನಡೆಸಬೇಕೆ ಎಂಬುದರ ಕುರಿತು ಶಿಕ್ಷಣ ಮತ್ತು ಆರೋಗ್ಯ ಸಚಿವಾಲಯಗಳು ನಡೆಸಿದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ ನಿರ್ಧರಿಸಿದಂತೆ ನೀಟ್‌ ಯುಜಿ ಪರೀಕ್ಷೆಯನ್ನು ಲಿಖಿತ ರೂಪ (ಒಎಂಆರ್‌)ದಲ್ಲಿ ನಡೆಸಲಾಗುತ್ತದೆ. ಪರೀಕ್ಷೆಯು ಒಂದೇ ದಿನ ಪಾಳಿಯ ಆಧಾರದಲ್ಲಿ ನಡೆಸಲಾಗುತ್ತದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಗುರುವಾರ ಹೇಳಿದೆ.

ನೀಟ್‌ಗಾಗಿ ಕಂಪ್ಯೂಟರ್‌ ಆಧಾರಿತ ಪರೀಕ್ಷಾ ಕ್ರಮವನ್ನು ಬದಲಿಸುವ ಕಲ್ಪನೆ ಇದೇ ಮೊದಲೇನಲ್ಲ. ಈ ಹಿಂದೆಯೇ ಹಲವು ಬಾರಿ ಇದರ ಬಗ್ಗೆ ಚಿಂತನೆ ನಡೆದಿತ್ತು. ಕಳೆದ ವರ್ಷ ನೀಟ್ ಹಗರಣದ ಬಳಿಕ ಪರೀಕ್ಷಾ ಕ್ರಮದಲ್ಲಿ ಮುನ್ನೆಲೆಗೆ ಬಂದಿದೆ.