ಸಾರಾಂಶ
ಅನಂತ್-ರಾಧಿಕಾ ವಿವಾಹಪೂರ್ವ ಸಮಾರಂಭದಲ್ಲಿ ನೀತಾ ಅಂಬಾನಿ ಧರಿಸಿದ್ದು ಹಸಿರು ಬಣ್ಣದ ಬೃಹತ್ ಗಾತ್ರದ ಪಚ್ಚೆ ಒಳಗೊಂಡ ವಜ್ರದ ನೆಕ್ಲೆಸ್ ಬಲೆ ಸುಮಾರು 500 ಕೋಟಿ ರು. ಆಗಿರಬಹುದು ಎಂದು ವಿಶ್ಲೇಷಿಸಲಾಗಿದೆ.
ಜಾಮ್‌ನಗರ: ಅಂಬಾನಿ ಕುಟುಂಬದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ.
ಇಲ್ಲಿ ಅನಂತ್ ಅವರ ತಾಯಿ ನೀತಾ ಅಂಬಾನಿ ಅವರು ತಮ್ಮ ಕತ್ತಿನಲ್ಲಿ ಧರಿಸಿದ್ದ ಹಸಿರು ಬಣ್ಣದ ಭರ್ಜರಿ ಗಾತ್ರದ ಪಚ್ಚೆ ಒಳಗೊಂಡ ವಜ್ರದ ನೆಕ್ಲೆಸ್ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.ಅದರ ಬೆಲೆ ಬರೋಬ್ಬರಿ 400-500 ಕೋಟಿ ರು. ಆಗಿರಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಅದಕ್ಕೆ ಹೊಂದಿಕೆಯಾಗುವಂತೆ ನೀತಾ ಅವರು ಬಳೆಗಳು ಮತ್ತು ಕಿವಿಯೋಲೆಗಳನ್ನೂ ಸಹ ಧರಿಸಿದ್ದು, ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಕಾಂಚೀಪುರಂ ಸೀರೆಯನ್ನೂ ಉಟ್ಟಿದ್ದರು.