ಸಿಂಗಾಪುರ, ಹಾಂಕಾಂಗ್‌ ದೇಶಗಳು ಭಾರತ ಮೂಲದ ಎವರೆಸ್ಟ್ ಮತ್ತು ಎಂಡಿಎಚ್‌ ಮಸಾಲೆಗಳಲ್ಲಿ ಹಾನಿಕಾರಕ , ರಾಸಾಯಾನಿಕ ಅಂಶಗಳಿವೆ ಎನ್ನುವ ಕಾರಣಕ್ಕೆ ನಿಷೇಧಿಸಿದ ಬೆನ್ನಲ್ಲೇ ಇದೀಗ ನೇಪಾಳದಲ್ಲಿ ಸುರಕ್ಷತೆಯ ಕಾರಣ ನೀಡಿ ಎವರೆಸ್ಟ್‌ ಮತ್ತು ಎಂಡಿಎಚ್ ಮಸಾಲೆಯನ್ನು ನಿಷೇಧಿಸಲಾಗಿದೆ.

ಕಾಠ್ಮಂಡು: ಸಿಂಗಾಪುರ, ಹಾಂಕಾಂಗ್‌ ದೇಶಗಳು ಭಾರತ ಮೂಲದ ಎವರೆಸ್ಟ್ ಮತ್ತು ಎಂಡಿಎಚ್‌ ಮಸಾಲೆಗಳಲ್ಲಿ ಹಾನಿಕಾರಕ , ರಾಸಾಯಾನಿಕ ಅಂಶಗಳಿವೆ ಎನ್ನುವ ಕಾರಣಕ್ಕೆ ನಿಷೇಧಿಸಿದ ಬೆನ್ನಲ್ಲೇ ಇದೀಗ ನೇಪಾಳದಲ್ಲಿ ಸುರಕ್ಷತೆಯ ಕಾರಣ ನೀಡಿ ಎವರೆಸ್ಟ್‌ ಮತ್ತು ಎಂಡಿಎಚ್ ಮಸಾಲೆಯನ್ನು ನಿಷೇಧಿಸಲಾಗಿದೆ.

ನೇಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟದ ಇಲಾಖೆಯು ಭಾರತೀಯ ಎರಡು ಬ್ರ್ಯಾಂಡ್ ಮಸಾಲ ಪದಾರ್ಥಗಳನ್ನು ಕ್ಯಾನ್ಸರ್‌ ಉಂಟು ಮಾಡುವ ಕೀಟನಾಶಕ ಎಥೀಲಿನ್ ಆಕ್ಸೈಡ್‌ ಇದೆಯೇ ಎನ್ನುವುದರ ಬಗ್ಗೆ ಪರೀಕ್ಷೆ ನಡೆಸುತ್ತಿದ್ದು, ಅಂತಿಮ ಫಲಿತಾಂಶ ಬರುವ ತನಕ ಎವರೆಸ್ಟ್, ಎಂಡಿಎಚ್‌ ಮಸಾಲೆಗಳ ಮಾರಾಟ ಹಾಗೂ ಅಮದನ್ನು ನಿಷೇಧಿಸಿದೆ.

‘ಎವರೆಸ್ಟ್ ಮತ್ತು ಎಂಡಿಎಚ್ ಮಸಾಲೆಗಳನ್ನು ಅಮದು ಹಾಗೂ ಪೇಟೆಯಲ್ಲಿ ಮಾರಾಟ ಮಾಡುವುದನ್ನು ಸಹ ನಿಷೇಧಿಸಿದ್ದೇವೆ. ಅವುಗಳಲ್ಲಿ ಹಾನಿಕಾರಕ ರಾಸಾಯನಿಕ ಅಂಶವಿದೆ ಎನ್ನುವ ಸುದ್ದಿ ಬಂದ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಅಂತಿಮ ಫಲಿತಾಂಶ ಬರುವ ತನಕ ಈ ಕ್ರಮ ಜಾರಿಯಲ್ಲಿರಲಿದೆ’ ಎಂದು ನೇಪಾಳದ ಆಹಾರ ತಂತ್ರಜ್ಙಾನದ ವಕ್ತಾರ ಮೋಹನ್ ಕೃಷ್ಣ ಮಹಾರಾಜನ್ ಹೇಳಿದ್ದಾರೆ.