ವಿಶ್ವದ ಬಹುತೇಕ ಕಡೆ ನಮ್ಮ ಮಾನ್ಯತೆಯನ್ನೇ ನಿರಾಕರಿಸುವ ಪ್ರಯತ್ನಗಳು ನಡೆದರೂ ಭಾರತದ ಜನ ಮಾತ್ರ ಇಸ್ರೇಲ್‌ ಅನ್ನು ಅತೀವವಾಗಿ ಪ್ರೀತಿಸುತ್ತಾರೆ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ.  

ಜೆರುಸಲೇಂ: ವಿಶ್ವದ ಬಹುತೇಕ ಕಡೆ ನಮ್ಮ ಮಾನ್ಯತೆಯನ್ನೇ ನಿರಾಕರಿಸುವ ಪ್ರಯತ್ನಗಳು ನಡೆದರೂ ಭಾರತದ ಜನ ಮಾತ್ರ ಇಸ್ರೇಲ್‌ ಅನ್ನು ಅತೀವವಾಗಿ ಪ್ರೀತಿಸುತ್ತಾರೆ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ.

ಭಾರತವು ವಿಶ್ವದ ಅತಿದೊಡ್ಡ ಶಕ್ತಿ

ಭಾರತವು ವಿಶ್ವದ ಅತಿದೊಡ್ಡ ಶಕ್ತಿಯಾಗಿದ್ದು, ಅಲ್ಲಿನ ಜನರ ಇಸ್ರೇಲ್‌ ಕುರಿತು ನಿಜವಾಗಿಯೂ ಭಾರೀ ಪ್ರೀತಿ ಹೊಂದಿದ್ದಾರೆ ಎಂದು ಹೊಗಳಿದ್ದಾರೆ.

ಮೈತ್ರಿಕೂಟವನ್ನು ದೊಡ್ಡಮಟ್ಟದಲ್ಲಿ ವಿಸ್ತರಿಸುತ್ತಿದ್ದೇವೆ

ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನೆತನ್ಯಾಹು ಇಸ್ರೇಲ್‌ನ ಸಹಭಾಗಿತ್ವ ವಿಸ್ತರಿಸುತ್ತಿರುವುದಕ್ಕೆ ಭಾರತ ಅತಿದೊಡ್ಡ ಉದಾಹರಣೆಯಾಗಿದೆ. ನಾವು ನಮ್ಮ ಮೈತ್ರಿಕೂಟವನ್ನು ದೊಡ್ಡಮಟ್ಟದಲ್ಲಿ ವಿಸ್ತರಿಸುತ್ತಿದ್ದೇವೆ. ನಾವು ಅತಿದೊಡ್ಡ ಶಕ್ತಿಯಾದ ಭಾರತದ ಜತೆಗೆ ವಿಶೇಷ ಸಂಬಂಧ ಹೊಂದಿದ್ದೇವೆ. ವಿಶ್ವದ ಹಲವು ಕಡೆ ನಮ್ಮ ಮಾನ್ಯತೆ ಪ್ರಶ್ನಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಭಾರತದಲ್ಲಿ ಅಂಥದ್ದು ಯಾವುದೂ ಇಲ್ಲ. ಭಾರತದಲ್ಲಿ ಇಸ್ರೇಲ್‌ ಕುರಿತು ನಿಜವಾಗಿಯೂ ಹುಚ್ಚು ಪ್ರೀತಿ ಇದೆ. ನನ್ನ ಪ್ರಕಾರ ಬೇರೆಡೆಗಿಂತ ನನಗೆ ಭಾರತದಲ್ಲಿ ಹೆಚ್ಚು ಮಂದಿ ಬೆಂಬಲಿಗರಿದ್ದಾರೆ’ ಎಂದು ನೆತನ್ಯಾಹು ಹೇಳಿಕೊಂಡಿದ್ದಾರೆ.