ಸಾರಾಂಶ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ನಾವೇಕೆ ಮತ ಹಾಕಬೇಕು ಎಂಬುದನ್ನು 101 ಕಾರಣಗಳ ಸಮೇತ ವರ್ಣಿಸುವ ಕಾಮಿಕ್ ಪುಸ್ತಕವೊಂದು ಬಿಡುಗಡೆಯಾಗಿದೆ.
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ನಾವೇಕೆ ಮತ ಹಾಕಬೇಕು ಎಂಬುದನ್ನು 101 ಕಾರಣಗಳ ಸಮೇತ ವರ್ಣಿಸುವ ಕಾಮಿಕ್ ಪುಸ್ತಕವೊಂದು ಬಿಡುಗಡೆಯಾಗಿದೆ.
ಬರಹಗಾರ ಶಂತನು ಗುಪ್ತಾ ಈ ಪುಸ್ತಕ ಹೊರತಂದಿದ್ದಾರೆ. ಇದು ಮೋದಿಗೆ ಮತ ಹಾಕುವಂತೆ ಮತದಾರರನ್ನು ಉತ್ತೇಜಿಸುತ್ತದೆ.
ಪುಸ್ತಕವನ್ನು ತಯಾರಿಸಲು ಅರೆ-ವಾಸ್ತವಿಕ ಶೈಲಿ, ಮಂಗಾ ಮತ್ತು ಡಿಸ್ನಿ ಶೈಲಿ, ಸಾಂಪ್ರದಾಯಿಕ ಭಾರತೀಯ ಕಾಮಿಕ್ ಪುಸ್ತಕ ಶೈಲಿ ಮತ್ತು ಕಪ್ಪು-ಬಿಳಿ ಶೈಲಿಯನ್ನು ಒಳಗೊಂಡಂತೆ 10 ಅಂತರರಾಷ್ಟ್ರೀಯ ಪ್ರಸಿದ್ಧ ಕಲಾ ಶೈಲಿ ಬಳಸಲಾಗಿದೆ.
ಪುಸ್ತಕವು ಆರೋಗ್ಯ, ರಕ್ಷಣೆ, ಕೃಷಿ, ಶಿಕ್ಷಣ, ಸಶಸ್ತ್ರ ಪಡೆ, ವಿದೇಶಾಂಗ ನೀತಿ, ಆರ್ಥಿಕತೆ, ಉದ್ಯೋಗ, ಮೂಲಸೌಕರ್ಯ ಮತ್ತು ಭಾರತದ ಸಾಂಸ್ಕೃತಿಕ ಪುನರುಜ್ಜೀವನಕ್ಕಾಗಿ ಮೋದಿಯವರ ಕೆಲಸದ ಬಗ್ಗೆ ತಿಳಿಸುತ್ತದೆ.