ಪ್ರತಿಭಟಿಸುತ್ತಿರುವ ಇಂದು ರೈತರ ಜತೆ ಜೋಶಿ 2ನೇ ಸುತ್ತಿನ ಸಂಧಾನ : ಪ್ರಹ್ಲಾದ್ ಜೋಶಿ ಭಾಗಿ

| N/A | Published : Feb 22 2025, 12:48 AM IST / Updated: Feb 22 2025, 06:47 AM IST

prahlad joshi

ಸಾರಾಂಶ

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಕಾನೂನು ರೂಪಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು 1 ವರ್ಷದಿಂದ ಹರ್ಯಾಣ, ಪಂಜಾಬ್‌ ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರ ಜತೆಗಿನ 2ನೇ ಸುತ್ತಿನ ಸಂಧಾನ ಸಭೆ ಶನಿವಾರ ಚಂಡೀಗಢದಲ್ಲಿ ನಡೆಯಲಿದೆ.

ಚಂಡೀಗಢ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಕಾನೂನು ರೂಪಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು 1 ವರ್ಷದಿಂದ ಹರ್ಯಾಣ, ಪಂಜಾಬ್‌ ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರ ಜತೆಗಿನ 2ನೇ ಸುತ್ತಿನ ಸಂಧಾನ ಸಭೆ ಶನಿವಾರ ಚಂಡೀಗಢದಲ್ಲಿ ನಡೆಯಲಿದೆ.

ಚಂಡೀಗಢದ ಮಹಾತ್ಮ ಗಾಂಧಿ ಸಾರ್ವಜನಿಕ ಆಡಳಿತ ಸಂಸ್ಥೆಯಲ್ಲಿ ಸಭೆ ನಡೆಯಲಿದ್ದು, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕೇಂದ್ರ ಪಡಿತರ ಸಚಿವ ಪ್ರಹ್ಲಾದ್ ಜೋಶಿ ಸರ್ಕಾರದ ಪ್ರತಿನಿಧಿಗಳಾಗಿ ಭಾಗವಹಿಸಲಿದ್ದಾರೆ.

ಫೆ.14ರಂದು ಜೋಶಿ ನಡೆಸಿದ ಮೊದಲ ಸುತ್ತಿನ ಸಭೆ ಸಾಕಾರಾತ್ಮಕವಾಗಿ ಮುಗಿದಿತ್ತು.

‘ರೈತರ ಬೇಡಿಕೆಗಳನ್ನು ಏಕೆ ಆಲಿಸುತ್ತಿಲ್ಲ?’ ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರವನ್ನು ಜನವರಿಯಲ್ಲಿ ತರಾಟೆಗೆ ತೆಗೆದುಕೊಂಡಿತ್ತು. ಆ ಬಳಿಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಪಂಜಾಬ್‌ನ ಕೃಷಿ ಮಂತ್ರಿ ಗುರ್ಮೀತ್ ಸಿಂಗ್ ಫೆ.14ರಂದು 28 ರೈತ ಮುಖಂಡರೊಂದಿಗೆ ಮೊದಲ ಬಾರಿ ಸಭೆ ನಡೆಸಿದ್ದರು. ಮೊದಲ ಸಂಧಾನ ಯತ್ನವು ಸಕಾರಾತ್ಮಕವಾಗಿ ಮುಗಿದಿದ್ದು, ಮುಂದಿನ ಹಂತದ ಮಾತುಕತೆ ಶನಿವಾರ ನಿಗದಿಯಾಗಿದೆ.