ಜಾಗತಿಕ ಮಾಧ್ಯಮ ಸಂಸ್ಥೆ ಫೋರ್ಬ್ಸ್, 2025ರ ಪ್ರಭಾವಿ ಮಹಿಳೆಯರ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಅವರ ಬಳಿಕದ ಸ್ಥಾನದಲ್ಲಿ ಎಚ್‌ಸಿಎಲ್‌ನ ಸಿಇಒ ರೋಶ್ನಿ ನಡಾರ್ ಮತ್ತು ಬೆಂಗಳೂರು ಮೂಲದ ಬಯೋಕಾನ್ ಲಿ. ಸ್ಥಾಪಕಿ ಕಿರಣ್ ಮಜುಂದಾರ್ ಶಾ ಇದ್ದಾರೆ.
ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟೀಲಿ ಭಾರತದ ಮೂವರಿಗೆ ಸ್ಥಾನ
ಎಚ್‌ಸಿಎಲ್‌ನ ರೋಶ್ನಿ ನಂ.2, ಬೆಂಗಳೂರಿನಕಿರಣ್ ಶಾ ನಂ.3ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಿಶ್ವದಲ್ಲಿ ನಂ.1
ನವದೆಹಲಿ: ಜಾಗತಿಕ ಮಾಧ್ಯಮ ಸಂಸ್ಥೆ ಫೋರ್ಬ್ಸ್, 2025ರ ಪ್ರಭಾವಿ ಮಹಿಳೆಯರ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಅವರ ಬಳಿಕದ ಸ್ಥಾನದಲ್ಲಿ ಎಚ್‌ಸಿಎಲ್‌ನ ಸಿಇಒ ರೋಶ್ನಿ ನಡಾರ್ ಮತ್ತು ಬೆಂಗಳೂರು ಮೂಲದ ಬಯೋಕಾನ್ ಲಿ. ಸ್ಥಾಪಕಿ ಕಿರಣ್ ಮಜುಂದಾರ್ ಶಾ ಇದ್ದಾರೆ.ಜಾಗತಿಕ ಮಟ್ಟದಲ್ಲಿ ಮೊದಲ ಸ್ಥಾನದಲ್ಲಿ ಯುರೋಪಿಯನ್ ಕಮಿಷನ್‌ನ ಮೊದಲ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇನ್ ಇದ್ದಾರೆ. ನಿರ್ಮಲಾ 24ನೇ ಸ್ಥಾನ, ರೋಶ್ನಿ 76, ಶಾ 83ನೇ ಸ್ಥಾನ ಪಡೆದಿದ್ದಾರೆ.
ಸಾಧನೆಯೇನು?:ಭಾರತದ 2ನೇ ವಿತ್ತಸಚಿವೆ ಆಗಿ, ಸತತ 8ನೇ ಬಾರಿ ಬಜೆಟ್ ಮಂಡಿಸಿದ ಖ್ಯಾತಿಯ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ನೀತಿಯನ್ನು ರೂಪಿಸುವಲ್ಲಿ ಮತ್ತು ರಾಷ್ಟ್ರೀಯ ಹಣಕಾಸು ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಕ್ಕಾಗಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ರೋಶ್ನಿ ಅವರು ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರೆ, ಮಧುಮೇಹ, ಕ್ಯಾನ್ಸರ್‌ನಂತಹ ದೀರ್ಘಕಾಲಿಕ ಅನಾರೋಗ್ಯಗಳಿಗೆ ಔಷಧಿ ತಯಾರಿಸುವ ಬಯೋಕಾನ್ ಸ್ಥಾಪಕಿ ಶಾ ಅವರು ಸ್ವ-ಸಾಮರ್ಥ್ಯದಿಂದ ಶ್ರೀಮಂತೆಯಾದವರು.
==ವಿಶ್ವದ ಟಾಪ್ 5 ಪ್ರಭಾವಿ ಸ್ತ್ರೀಯರು
1. ಉರ್ಸುಲಾ(ಯುರೋಪಿಯನ್ ಕಮಿಷನ್ ಅಧ್ಯಕ್ಷೆ)2. ಕ್ರಿಸ್ಟೀನ್ ಲಗಾರ್ಡ್(ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥೆ)
3. ಸಾನೆ ತಕೈಚಿ(ಜಪಾನ್‌ನ ಮೊದಲ ಮಹಿಳಾ ಪ್ರಧಾನಿ)4. ಸುಸಾನ್ ಲಿ(ಮೆಟಾದ ಮುಖ್ಯ ಹಣಕಾಸು ಅಧಿಕಾರಿ)
5. ಸಾರಾ ಫ್ರಿಯರ್(ಓಪನ್‌ಎಐನ ಮುಖ್ಯ ಹಣಕಾಸು ಅಧಿಕಾರಿ)