ಮೊದಲು ಭಾಷಣದಲ್ಲಿ ಎಡವಟ್ಟು, ನಂತರ ಮೋದಿ ಪಾದಸ್ಪರ್ಶ!

| Published : Apr 08 2024, 01:02 AM IST / Updated: Apr 08 2024, 05:55 AM IST

ಸಾರಾಂಶ

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಬಿಹಾರದ ನವಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಸಮಾವೇಶದಲ್ಲಿ 2 ಸಲ ಎಡವಟ್ಟು ಮಾಡಿಕೊಂಡು ಮುಜುಗರಕ್ಕೆ ಒಳಗಾದ ಘಟನೆ ನಡಯಿತು.

ನವಾಡಾ (ಬಿಹಾರ): ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಬಿಹಾರದ ನವಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಸಮಾವೇಶದಲ್ಲಿ 2 ಸಲ ಎಡವಟ್ಟು ಮಾಡಿಕೊಂಡು ಮುಜುಗರಕ್ಕೆ ಒಳಗಾದ ಘಟನೆ ನಡಯಿತು.

ಮೊದಲು ಭಾಷಣದಲ್ಲಿ ನಿತೀಶ್ ‘ಎನ್‌ಡಿಎ ‘ಚಾರ್‌ ಲಾಖ್‌ (ನಾಲ್ಕು ಲಕ್ಷ)’ ಎಂದರು. ನಂತರ ತಮ್ಮನ್ನು ತಾವು ಸರಿಪಡಿಸಿಕೊಂಡು ‘ಚಾರ್ ಹಜಾರ್ ಸೆ ಭಿ ಝ್ಯಾದಾ (4,000 ಕ್ಕಿಂತ ಹೆಚ್ಚು)’ ಎಂದರು. ಕೊನೆಗೆ ಎನ್‌ಡಿಎ ‘400 ಪ್ಲಸ್’ ಸ್ಥಾನ ಗೆಲ್ಲಲಿದೆ’ ಎಂದು ಸರಿಪಡಿಸಿಕೊಂಡರು.

ಭಾಷಣದ ನಂತರ ನಿತೀಶ್ ಅವರು ಪಕ್ಕದಲ್ಲಿದ್ದ ಮೋದಿಯವರ ಪಾದಗಳನ್ನು ಸ್ಪರ್ಶಿಸುತ್ತಿರುವುದು ಕಂಡುಬಂದಿತು.