ಬಿಹಾರ ವಿಧಾನ ಪರಿಷತ್ತಿಗೆ ನಿತೀಶ್ ಸೇರಿ 11 ಮಂದಿ ಅವಿರೋಧ ಆಯ್ಕೆ

| Published : Mar 15 2024, 01:15 AM IST

ಬಿಹಾರ ವಿಧಾನ ಪರಿಷತ್ತಿಗೆ ನಿತೀಶ್ ಸೇರಿ 11 ಮಂದಿ ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಹಾರದ ವಿಧಾನ ಪರಿಷತ್ತಿಗೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸೇರಿ 11 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಟನಾ: ಬಿಹಾರ ಸಿಎಂ ನಿತೀಶ್ ಕುಮಾರ್ ಸತತ 4ನೇ ಬಾರಿಗೆ ವಿಧಾನ ಪರಿಷತ್ತಿಗೆ ಅವಿರೋಧವಾಗಿ ಗುರುವಾರ ಆಯ್ಕೆಯಾಗಿದ್ದಾರೆ.

ವಿಧಾನ ಪರಿಷತ್ತಿನ ಹನ್ನೊಂದು ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಗೆ ಸ್ಪರ್ಧಿಸಿದ್ದ ವಿವಿಧ ಪಕ್ಷದ 10 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಸಿಂಗ್, ಡಿಸಿಎಂಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ, ಆರ್‌ಜೆಡಿಯ ಮಾಜಿ ಸಿಎಂ ರಾಬ್ಡಿ ದೇವಿ, ಎಚ್ಎಂಎಂ ಪಕ್ಷದ ಸಂತೋಷ ಸುಮನ್‌, ಬಿಜೆಪಿಯ ಮಂಗಲ್ ಪಾಂಡೆ ವಿಧಾನ ಪರಿಷತ್ತಿಗೆ ನೇಮಕವಾಗಿದ್ದಾರೆ.