ಕರ್ನಾಟಕ ಸೇರಿದಂತೆ ಕೆಲ ದಕ್ಷಿಣದ ರಾಜ್ಯಗಳಲ್ಲಿ ಬರ ಪರಿಸ್ಥಿತಿ ಇರುವ ಹೊತ್ತಿನಲ್ಲೇ, ಮುಂದಿನ 4-5 ದಿನಗಳಲ್ಲಿ ಈ ಪ್ರದೇಶಕ್ಕೆ ಹಿಂಗಾರು ಪ್ರವೇಶಿಸಲಿದ್ದು ಭಾರೀ ಮಳೆಯಾಗಲಿದೆ ಎಂಬ ಶುಭಸುದ್ದಿಯನ್ನು ಹವಾಮಾನ ಇಲಾಖೆ (ಐಎಂಡಿ) ನೀಡಿದೆ.

ನವದೆಹಲಿ: ಕರ್ನಾಟಕ ಸೇರಿದಂತೆ ಕೆಲ ದಕ್ಷಿಣದ ರಾಜ್ಯಗಳಲ್ಲಿ ಬರ ಪರಿಸ್ಥಿತಿ ಇರುವ ಹೊತ್ತಿನಲ್ಲೇ, ಮುಂದಿನ 4-5 ದಿನಗಳಲ್ಲಿ ಈ ಪ್ರದೇಶಕ್ಕೆ ಹಿಂಗಾರು ಪ್ರವೇಶಿಸಲಿದ್ದು ಭಾರೀ ಮಳೆಯಾಗಲಿದೆ ಎಂಬ ಶುಭಸುದ್ದಿಯನ್ನು ಹವಾಮಾನ ಇಲಾಖೆ (ಐಎಂಡಿ) ನೀಡಿದೆ.

2-3 ದಿನಗಳಲ್ಲಿ ದಕ್ಷಿಣ ಭಾರತಕ್ಕೆ ಈಶಾನ್ಯ ಮಾರುತ ಪ್ರವೇಶ

2-3 ದಿನಗಳಲ್ಲಿ ದಕ್ಷಿಣ ಭಾರತಕ್ಕೆ ಈಶಾನ್ಯ ಮಾರುತ ಪ್ರವೇಶಿಸಲು ಪೂರಕ ವಾತಾವರಣ ಸೃಷ್ಟಿಯಾಗಲಿದೆ. ಪರಿಣಾಮ ಅ.15ರಿಂದ 18ರ ವರೆಗೆ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ಕೇರಳ, ಮಾಹೆ, ತಮಿಳುನಾಡು, ಪುದುಚೇರಿ, ಕಾರೈಕಲ್‌ ಹಾಗೂ ಆಂಧ್ರಪ್ರದೇಶ ಹಲವೆಡೆ ವರ್ಷಧಾರೆಯ ನಿರೀಕ್ಷೆಯಿದೆ. ಅಂತೆಯೇ, ಅ.17 ಮತ್ತು 18ರಂದು ಕರ್ನಾಟಕದಲ್ಲಿ, ಅ.15 ಮತ್ತು 16ರಂದು ರಾಯಲಸೀಮೆಯಲ್ಲಿ ಮಳೆಯಾಗಲಿದೆ.

ಇದರೊಂದಿಗೆ ನೈಋತ್ಯ ಮುಂಗಾರು ಭಾರತದಿಂದ ನಿರ್ಗಮಿಸಲಿದೆ.

ಶೇ.12.6ರಷ್ಟು ಮಳೆ ಕೊರತೆ:

ಕೃಷಿಗೆ ಅತ್ಯಗತ್ಯವಾದ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ನೈಋತ್ಯ ಮುಂಗಾರು ಅವಧಿಯಲ್ಲಿ ದೇಶದಲ್ಲಿ ವಾಡಿಕೆಗಿಂತ ಶೇ.12.6ರಷ್ಟು ಕಡಿಮೆ, ಅರ್ಥಾತ್‌ 759.4 ಮಿ.ಮೀ. ಮಳೆಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 868.6 ಮಿ.ಮೀ. ಮಳೆಯಾಗುತ್ತದೆ ಎಂದು ಐಎಂಡಿ ತಿಳಿಸಿದೆ. ಎಲ್‌ ನಿನೋ ಇದಕ್ಕೆ ಪ್ರಮುಖ ಕಾರಣ.