ಪಕ್ಷ ನಿಷ್ಠೆಗಿಂತ ದೇಶಕ್ಕಾಗಿ ಮತ ನೀಡಿ : ಸುದರ್ಶನ್ ರೆಡ್ಡಿ ಮನವಿ

| N/A | Published : Sep 08 2025, 01:00 AM IST

ಸಾರಾಂಶ

‘ಪಕ್ಷದ ಮೇಲಿನ ನಿಮ್ಮ ಬದ್ಧತೆಗಿಂತ ದೇಶದ ಮೇಲಿನ ಪ್ರೀತಿಯಿಂದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತಚಲಾಯಿಸಿ ’ ಎಂದು ಇಂಡಿಯಾ ಮೈತ್ರಿಕೂಟದ ಉಪರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ನ್ಯಾ। ಬಿ. ಸುದರ್ಶನ್‌ ರೆಡ್ಡಿ ಸಂಸದರಿಗೆ ಮನವಿ ಮಾಡಿದ್ದಾರೆ.

 ನವದೆಹಲಿ :  ‘ಪಕ್ಷದ ಮೇಲಿನ ನಿಮ್ಮ ಬದ್ಧತೆಗಿಂತ ದೇಶದ ಮೇಲಿನ ಪ್ರೀತಿಯಿಂದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತಚಲಾಯಿಸಿ ’ ಎಂದು ಇಂಡಿಯಾ ಮೈತ್ರಿಕೂಟದ ಉಪರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ನ್ಯಾ। ಬಿ. ಸುದರ್ಶನ್‌ ರೆಡ್ಡಿ ಸಂಸದರಿಗೆ ಮನವಿ ಮಾಡಿದ್ದಾರೆ.

ಸೆ.9ರಂದು ಉಪರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಸಂಸದರಿಗಾಗಿ 12 ನಿಮಿಷಗಳ ವಿಡಿಯೋ ಸಂದೇಶ ನೀಡಿರುವ ಅವರು, ‘ನಿಮ್ಮ ಬೆಂಬಲವನ್ನು ನನಗಾಗಿ ಅಲ್ಲ. ನಮ್ಮನ್ನು ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯ ಎಂದು ವ್ಯಾಖ್ಯಾನಿಸುವ ಮೌಲ್ಯಗಳಿಗಾಗಿ ಮತ ಹಾಕಿ. ಈ ಚುನಾವಣೆಯಲ್ಲಿ ಪಕ್ಷದ ವಿಪ್ ಇಲ್ಲ. ಮತಪತ್ರ ರಹಸ್ಯವಾಗಿದೆ. ನಿಮ್ಮ ಪಕ್ಷದ ಮೇಲಿನ ನಿಷ್ಠೆಗೆ ಆದ್ಯತೆ ನೀಡಬೇಡಿ. ಬದಲಾಗಿ ದೇಶದ ಮೇಲಿನ ಪ್ರೀತಿಗೆ ಮತ ನೀಡಿ. ಪ್ರಜಾಪ್ರಭುತ್ವ ಕಾಪಾಡಲು ನೈತಿಕ ಜವಾಬ್ದಾರಿ ಹೊತ್ತಿದ್ದೀರಿ. ಇದು ಕೇವಲ ಉಪರಾಷ್ಟ್ರಪತಿ ಆಯ್ಕೆಯಲ್ಲ. ಭಾರತದ ಚೈತನ್ಯಕ್ಕಾಗಿ ಮತ’ ಎಂದು ಹೇಳಿದ್ದಾರೆ.

Read more Articles on