ಸಾರಾಂಶ
ಬಿಕ್ಕಟ್ಟಿನಿಂದ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಮುಂದೂಡಲ್ಪಟ್ಟ ಬೆನ್ನಲ್ಲೇ ಒಡಿಶಾ ಫುಟ್ಬಾಲ್ ಕ್ಲಬ್ (ಒಎಫ್‌ಸಿ) ಸೇರಿ ಹಲವು ಕ್ಲಬ್‌ಗಳು ತನ್ನ ಆಟಗಾರರು ಹಾಗೂ ಸಿಬ್ಬಂದಿ ಜತೆಗಿನ ಒಪ್ಪಂದವನ್ನು ರದ್ದುಗೊಳಿಸಿವೆ ಎನ್ನುವ ಸುದ್ದಿ ಹೊರಬಿದ್ದಿದೆ.
ನವದೆಹಲಿ: ರಿಲಯನ್ಸ್ ಒಡೆತನದ ಫುಟ್ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್(ಎಫ್‌ಎಸ್‌ಡಿಎಲ್) ಮತ್ತು ಅಖಿಲ ಭಾರತೀಯ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್) ಬಿಕ್ಕಟ್ಟಿನಿಂದ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಮುಂದೂಡಲ್ಪಟ್ಟ ಬೆನ್ನಲ್ಲೇ ಒಡಿಶಾ ಫುಟ್ಬಾಲ್ ಕ್ಲಬ್ (ಒಎಫ್‌ಸಿ) ಸೇರಿ ಹಲವು ಕ್ಲಬ್‌ಗಳು ತನ್ನ ಆಟಗಾರರು ಹಾಗೂ ಸಿಬ್ಬಂದಿ ಜತೆಗಿನ ಒಪ್ಪಂದವನ್ನು ರದ್ದುಗೊಳಿಸಿವೆ ಎನ್ನುವ ಸುದ್ದಿ ಹೊರಬಿದ್ದಿದೆ.
ಆತಿಥ್ಯ ಹಕ್ಕನ್ನು ಎಐಎಫ್‌ಎಫ್ ನವೀಕರಣಗೊಳಿಸದ ಹಿನ್ನೆಲೆಯಲ್ಲಿ ಟೂರ್ನಿಯನ್ನು ತಾತ್ಕಾಲಿಕವಾಗಿ ಮುಂದೂಡುವುದಾಗಿ ಎಫ್‌ಎಸ್‌ಡಿಎಲ್ ಇತ್ತೀಚೆಗೆ ಘೋಷಿಸಿತ್ತು. ಆದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎಫ್‌ಎಸ್‌ಡಿಎಲ್‌ಗೆ ಇನ್ನೂ ಸಾಧ್ಯವಾಗಿಲ್ಲ. ಆತಿಥ್ಯ ಹಕ್ಕು ನವೀಕರಿಸುವ ಬಗ್ಗೆ ಎಐಎಫ್‌ಎಫ್ ಸಹ ಯಾವುದೇ ಆಸಕ್ತಿ ತೋರುತ್ತಿಲ್ಲ. ಹೀಗಾಗಿ, ಈ ವರ್ಷ ಟೂರ್ನಿ ನಡೆಯದೆ ಇರಬಹುದು ಎನ್ನುವ ಚರ್ಚೆ ಭಾರತೀಯ ಫುಟ್ಬಾಲ್ ವಲಯದಲ್ಲಿ ನಡೆಯುತ್ತಿದೆ.