ಸಾರಾಂಶ
ಉತ್ತರಾಖಂಡ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾದ 10 ದಿನದ ಬಳಿಕ ಮೊದಲ ಲಿವ್ ಇನ್ ಸಂಬಂಧವನ್ನು ನೋಂದಣಿ ಮಾಡಲಾಗಿದೆ.
ಡೆಹ್ರಾಡೂನ್: ಉತ್ತರಾಖಂಡ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾದ 10 ದಿನದ ಬಳಿಕ ಮೊದಲ ಲಿವ್ ಇನ್ ಸಂಬಂಧವನ್ನು ನೋಂದಣಿ ಮಾಡಲಾಗಿದೆ.
ಜ.27ರಂದು ಉತ್ತರಾಖಂಡದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಯುಸಿಸಿ ಕಾನೂನನ್ನು ಜಾರಿಗೆ ತರಲಾಗಿತ್ತು. ಅದರಡಿ ಲಿವ್- ಇನ್ ಸಂಬಂಧದಲ್ಲಿರುವ ಜೋಡಿಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು.ಅದರನ್ವಯ ಕಳೆದ 10 ದಿನಗಳಲ್ಲಿ ಒಟ್ಟು 5 ಲಿವ್ ಇನ್ ಜೋಡಿಗಳು ತಮ್ಮ ಸಂಬಂಧ ನೋಂದಣಿಗೆ ಅರ್ಜಿ ಸಲ್ಲಿಸಿವೆ.
ಈ ಪೈಕಿ ಒಂದು ಜೋಡಿಯ ದಾಖಲೆಗಳನ್ನೆಲ್ಲ ಪರಿಶೀಲಿಸಿ ನೋಂದಣಿ ಮಾಡಲಾಗಿದೆ. ಇನ್ನು 4 ಜೋಡಿಗಳ ಪರೀಶಿಲನೆ ಪ್ರಕ್ರಿಯೆ ಬಾಕಿಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಲಿವ್ ಇನ್ ಸಂಬಂಧದಲ್ಲಿನ ವಂಚನೆ, ದ್ರೋಹ ಮತ್ತಿತರೆ ಪ್ರಕರಣಗಳಿಗೆ ತಡೆ ನೀಡಲು ಲಿವ್ ಇನ್ ಸಂಬಂಧವನ್ನು ಕೂಡಾ ವಿವಾಹದ ರೀತಿಯಲ್ಲೇ ನೋಂದಣಿ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ.