ಬಿಹಾರದ ಗಯಾ ಜಿಲ್ಲೆಯ ಜಮುಹರ್‌ ಗ್ರಾಮದಲ್ಲಿ ಅಟಿಕೆ ವಸ್ತುವೆಂದು ಹಾವನ್ನು ಕಚ್ಚಿ ಕೊಂದ 1 ವರ್ಷದ ಬಾಲಕ!

| Published : Aug 22 2024, 12:51 AM IST / Updated: Aug 22 2024, 04:59 AM IST

ಸಾರಾಂಶ

ಆಟಿಕೆ ವಸ್ತು ಎಂದು ತಿಳಿದು ಒಂದು ವರ್ಷದ ಬಾಲಕನೊಬ್ಬ ಹಾವನ್ನು ಕಚ್ಚಿ ಸಾಯಿಸಿದ ವಿಲಕ್ಷಣ ಘಟನೆ ಬಿಹಾರದ ಗಯಾ ಜಿಲ್ಲೆಯ  ಜಮುಹರ್‌ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗಯಾ: ಆಟಿಕೆ ವಸ್ತು ಎಂದು ತಿಳಿದು ಒಂದು ವರ್ಷದ ಬಾಲಕನೊಬ್ಬ ಹಾವನ್ನು ಕಚ್ಚಿ ಸಾಯಿಸಿದ ವಿಲಕ್ಷಣ ಘಟನೆ ಬಿಹಾರದ ಗಯಾ ಜಿಲ್ಲೆಯಲ್ಲಿ ಜಮುಹರ್‌ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನಡೆದಿದ್ದು ಏನು?: ಕಳೆದ ವಾರ ಒಂದು ವರ್ಷದ ಬಾಲಕನೊಬ್ಬ ತಮ್ಮ ಮನೆಯ ಮಹಡಿ ಮೇಲೆ ಆಟವಾಡುತ್ತಿದ್ದಾಗ ಆಟಿಕೆ ವಸ್ತುವೆಂದುಕೊಂಡು ಚಿಕ್ಕ ಹಾವನ್ನು ಹಿಡಿದು ಬಾಯಲ್ಲಿಟ್ಟುಕೊಂಡು ಕಚ್ಚಿದ್ದಾನೆ. ಹಾವು ಸಾವನ್ನಪ್ಪಿದೆ. ಬಾಲಕ ಹಾವನ್ನು ಬಾಯಲ್ಲಿಟ್ಟುಕೊಂಡು ಅಗೆಯುವುದನ್ನು ನೋಡಿದ ಮಗುವಿನ ತಾಯಿ ಹಾವನ್ನು ಬಾಯಿಯಿಂದ ತೆಗೆದುಹಾಕಿ ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಮಗುವನ್ನು ಪರೀಕ್ಷಿಸಿ, ಮಗು ಸುರಕ್ಷಿತವಾಗಿದೆ, ಯಾವುದೇ ಪ್ರಾಣಾಪಾಯವಿಲ್ಲವೆಂದು ತಿಳಿಸಿದ್ದಾರೆ.

ವಿಷಕಾರಿ ಹಾವೇನಲ್ಲ. ಮಳೆಗಾಲದಲ್ಲಿ ಇಂತಹ ಹಾವುಗಳು ಕಂಡುಬರುವುದು ಸಾಮಾನ್ಯ. ಆದರೆ ಮಕ್ಕಳ ಬಗ್ಗೆ ಜಾಗರೂಕರಾಗಿರಿ ಎಂದು ವೈದ್ಯರು ಪೋಷಕರನ್ನು ಎಚ್ಚರಿಸಿದ್ದಾರೆ.

ಅಮರನಾಥ ಯಾತ್ರೆ ಅಂತ್ಯ: ದಾಖಲೆಯ 5.12 ಲಕ್ಷ ಭಕ್ತರಿಂದ ಹಿಮಲಿಂಗ ದರ್ಶನ

ನವದೆಹಲಿ: ಪುರಾಣಪ್ರಸಿದ್ಧ ಅಮರನಾಥ ಯಾತ್ರೆಯು ಸೋಮವಾರ ಮುಕ್ತಾಯಗೊಂಡಿದ್ದು, ಈ ಬಾರಿ 12 ವರ್ಷಗಳಲ್ಲಿಯೇ ದಾಖಲೆ ಪ್ರಮಾಣದ 5.12 ಲಕ್ಷ ಭಕ್ತರು ದೇವರ ದರ್ಶನ ಪಡೆದಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

2023ರಲ್ಲಿ 4.45 ಲಕ್ಷ ಜನರು ಹಿಮಲಿಂಗದ ದರ್ಶನ ಪಡೆದಿದ್ದರು.ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಸಚಿವರು, ‘ಈ ದಾಖಲೆಯನ್ನು ಸೃಷ್ಟಿಯಾಗಲು ಸಹಕರಿಸಿದ ಅಮರನಾಥ ಮಂಡಳಿಯ ಅಧಿಕಾರಿಗಳು, ಭದ್ರತಾ ಪಡೆಗಳಿಗೆ ಧನ್ಯವಾದಗಳು. ನಿಮ್ಮ ಕೊಡುಗೆ ಅಪಾರ’ ಎಂದು ಬರೆದುಕೊಂಡಿದ್ದಾರೆ.ಈ ಬಾರಿಯ ಅಮರನಾಥ ಯಾತ್ರೆಯು ಜೂನ್‌. 29ರಿಂದ ಆರಂಭವಾಗಿದ್ದು ಸಾಂಪ್ರದಾಯಿಕ ಮಾರ್ಗ ಪಹಲ್ಗಾಂ ಮತ್ತು ಕಡಿದಾದ ಬಾಲ್ತಾಳ್‌ ಮಾರ್ಗದಲ್ಲಿ ತೆರಳಿ ಭಕ್ತರು ಅಮರನಾಥನ ದರ್ಶನ ಪಡೆದಿದ್ದಾರೆ.