ದೆಹಲಿ ಸೇರಿದಂತೆ ದೇಶ ಹಲವೆಡೆ ವಾಯುಮಾಲಿನ್ಯ ಹೆಚ್ಚಳವಾಗುತ್ತಿದ್ದು, ಇದರ ನಿವಾರಣೆ ಬಗ್ಗೆ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿ ವಿಪಕ್ಷ ಸಂಸದರು, ಬುಧವಾರ ಗ್ಯಾಸ್ ಮಾಸ್ಕ್ ಧರಿಸಿ ಸಂಸತ್‌ಗೆ ಬಂದು ಗಮನ ಸೆಳೆದರು.
ನವದೆಹಲಿ: ದೆಹಲಿ ಸೇರಿದಂತೆ ದೇಶ ಹಲವೆಡೆ ವಾಯುಮಾಲಿನ್ಯ ಹೆಚ್ಚಳವಾಗುತ್ತಿದ್ದು, ಇದರ ನಿವಾರಣೆ ಬಗ್ಗೆ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿ ವಿಪಕ್ಷ ಸಂಸದರು, ಬುಧವಾರ ಗ್ಯಾಸ್ ಮಾಸ್ಕ್ ಧರಿಸಿ ಸಂಸತ್‌ಗೆ ಬಂದು ಗಮನ ಸೆಳೆದರು.
ವಾಯುಮಾಲಿನ್ಯ ತಡೆಗೆ ತುರ್ತು ಕ್ರಮ ಕೈಗೊಳ್ಳಬೇಕು
ಕಾಂಗ್ರೆಸ್‌ನ ಹಿರಿಯ ಸಂಸದ ದೀಪೆಂದರ್ ಹೂಡಾ ಸೇರಿದಂತೆ ಕೆಲವರು ಈ ರೀತಿ ಮಾಸ್ಕ್ ಧರಿಸಿ ಬಂದಿದ್ದರು. ಈ ವೇಳೆ ಹೂಡಾ ಮಾತನಾಡಿ , ‘ಕೇಂದ್ರ ಇತರ ರಾಜ್ಯಗಳ ದೂಷಣೆ ನಿಲ್ಲಿಸಿ ವಾಯುಮಾಲಿನ್ಯ ತಡೆಗೆ ತುರ್ತು ಕ್ರಮ ಕೈಗೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಈ ಬಿಕ್ಕಟ್ಟು ನಿಭಾಯಿಸಲು ಮುಂದಾಳತ್ವ ವಹಿಸಬೇಕು’ ಎಂದರು.
ಸಮಿತಿ ರಚಿಸಿ ಸಮಸ್ಯೆ ಪರಿಹಾರದ ಬಗ್ಗೆ ಚರ್ಚೆ ನಡೆಸಬೇಕು
ಇದರ ಜತೆಗೆ ವಾಯುಮಾಲಿನ್ಯ ಎದುರಿಸುತ್ತಿರುವ ದೆಹಲಿ, ಹರ್ಯಾಣ, ಪಂಜಾಬ್ , ಉತ್ತರಪ್ರದೇಶ ಮುಖ್ಯಮಂತ್ರಿಗಳ ಸಮಿತಿ ರಚಿಸಿ ಸಮಸ್ಯೆ ಪರಿಹಾರದ ಬಗ್ಗೆ ಚರ್ಚೆ ನಡೆಸಬೇಕು ಎಂದು ಸಲಹೆ ನೀಡಿದರು..
