ದೇಶದಲ್ಲಿ 1 ಲಕ್ಷ ಏಕ ಶಿಕ್ಷಕ ಶಾಲೆ : ಕರ್ನಾಟಕ ನಂ.5

| N/A | Published : Oct 13 2025, 02:01 AM IST

ದೇಶದಲ್ಲಿ 1 ಲಕ್ಷ ಏಕ ಶಿಕ್ಷಕ ಶಾಲೆ : ಕರ್ನಾಟಕ ನಂ.5
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ 1 ಲಕ್ಷಕ್ಕೂ ಅಧಿಕ ಏಕೋಪಾಧ್ಯಾಯ ಶಾಲೆಗಳಲ್ಲಿ 33 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಅತಿ ಹೆಚ್ಚು ಏಕೋಪಾಧ್ಯಾಯ ಶಾಲೆಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ 5ನೇ ಸ್ಥಾನದಲ್ಲಿದೆ ಎಂದು ಶಿಕ್ಷಣ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ನವದೆಹಲಿ: ದೇಶದ 1 ಲಕ್ಷಕ್ಕೂ ಅಧಿಕ ಏಕೋಪಾಧ್ಯಾಯ ಶಾಲೆಗಳಲ್ಲಿ 33 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಅತಿ ಹೆಚ್ಚು ಏಕೋಪಾಧ್ಯಾಯ ಶಾಲೆಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ 5ನೇ ಸ್ಥಾನದಲ್ಲಿದೆ ಎಂದು ಶಿಕ್ಷಣ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

2024-25ನೇ ಶೈಕ್ಷಣಿಕ ವರ್ಷದಲ್ಲಿ, ಭಾರತದಲ್ಲಿ 1,04,125 ಶಾಲೆಗಳು ಒಬ್ಬರೇ ಶಿಕ್ಷಕರಿಂದ ಕಾರ್ಯನಿರ್ವಹಿಸುತ್ತಿವೆ. ಇಂಥ ಶಾಲೆಗಳಲ್ಲಿ, ಪ್ರತಿ ಶಾಲೆಗೆ ಸರಾಸರಿ 34 ವಿದ್ಯಾರ್ಥಿಗಳಂತೆ ಒಟ್ಟು 33,76,769 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಏಕ-ಶಿಕ್ಷಕ ಶಾಲೆಗಳು ಆಂಧ್ರಪ್ರದೇಶದಲ್ಲಿವೆ (12,912). ಉತ್ತರ ಪ್ರದೇಶ (9,508), ಜಾರ್ಖಂಡ್ (9,1720), ಮಹಾರಾಷ್ಟ್ರ (8,152), ಕರ್ನಾಟಕ (7,349) ಮತ್ತು ಲಕ್ಷದ್ವೀಪ (7,217) ನಂತರದ ಸ್ಥಾನದಲ್ಲಿವೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು (6,24,327) ಏಕ-ಶಿಕ್ಷಕ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.

-ಏಕೋಪಾಧ್ಯಾಯರಿಂದ 33 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ

-ಕರ್ನಾಟಕದ 7,349 ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರ ಕಾರ್ಯ

Read more Articles on