ಕಾಲ್ತುಳಿತ ಘಟನಾ ಸ್ಥಳ, ಆಸ್ಪತ್ರೆಯಲ್ಲಿ ಮನಕಲಕುವ ದೃಶ್ಯ

| Published : Jul 03 2024, 12:23 AM IST

ಸಾರಾಂಶ

ಇಲ್ಲಿ ನಡೆದ ಧಾರ್ಮಿಕ ಸಭೆಯೊಂದರಲ್ಲಿ ಕಾಲ್ತುಳಿತ ಸಂಭವಿಸಿದ್ದು, 100ಕ್ಕೂ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ. ಈ ಪೈಕಿ ಗಾಯಗೊಂಡ ನೂರಾರು ಜನರನ್ನು ಎಟಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾಥ್ರಸ್‌ (ಉ.ಪ್ರ): ಇಲ್ಲಿ ನಡೆದ ಧಾರ್ಮಿಕ ಸಭೆಯೊಂದರಲ್ಲಿ ಕಾಲ್ತುಳಿತ ಸಂಭವಿಸಿದ್ದು, 100ಕ್ಕೂ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ. ಈ ಪೈಕಿ ಗಾಯಗೊಂಡ ನೂರಾರು ಜನರನ್ನು ಎಟಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ನಡುವೆ, ಗಾಯಾಳುಗಳನ್ನು ಹಾಗೂ ಶವಗಳನ್ನು ಎಟಾ ಆಸ್ಪತ್ರೆಗೆ ಟ್ರಕ್‌ ಹಾಗೂ ಟೆಂಪೋಗಳಲ್ಲಿ ತರಲಾಗಿದೆ. ಆಸ್ಪತ್ರೆಯಲ್ಲಿ ಪುಟ್ಟ ಬಾಲಕರು ಸೇರಿ ಹಲವರ ಶವಗಳನ್ನು ಕೋಣೆಯೊಂದರಲ್ಲಿ ನೆಲದ ಮೇಲೆ ಮಲಗಿಸಲಾಗಿದ್ದು, ಅದರ ಸುತ್ತ ಜನರು ರೋದಿಸುತ್ತಿರುವ ದೃಶ್ಯಗಳು ಹೃದಯ ಕಲಕುವಂತಿವೆ.

==

ಹಾಥ್ರಸ್‌ ಕಾಲ್ತುಳಿತಕ್ಕೆ ಮೋದಿ. ಯೋಗಿ ಆಘಾತ

ನವದೆಹಲಿ: ಹಾಥ್ರಸ್‌ ಭೋಲೆಬಾಬಾ ಸತ್ಸಂಗ್‌ ಕಾಲ್ತುಳಿತ ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿನ ತಮ್ಮ ಭಾಷಣದ ವೇಳೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಮೋದಿ ತಲಾ 2 ಲಕ್ಷ ರು. ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಲಾ 2 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಘಟನೆಯ ಬಗ್ಗೆ ಅತೀವ ದುಃಖ ವ್ಯಕ್ತಪಡಿಸಿದ್ದಾರೆ.==ಯಾರು ಈ ಬಾಬಾ?ಕಾಲ್ತುಳಿತಕ್ಕೆ ಕಾರಣವಾದ ಸತ್ಸಂಗ ಹಮ್ಮಿಕೊಂಡವರು ಬಾಬಾ ನಾರಾಯಣ ಸಾಕರ್ ಹರಿ ಅಲಿಯಾಸ್‌ ಭೋಲೆ ಬಾಬಾ. ಇವರು ಉತ್ತರ ಪ್ರದೇಶದ ಎಟಾದವರು. ತಾವು ಗುಪ್ತಚರ ದಳದಲ್ಲಿ ಉದ್ಯೋಗಿ ಆಗಿದ್ದಾಗಿ ಹೇಳುವ ಅವರು 26 ವರ್ಷಗಳ ಹಿಂದೆ ತಮ್ಮ ಸರ್ಕಾರಿ ಕೆಲಸ ತೊರೆದು ಧಾರ್ಮಿಕ ಪ್ರವಚನ ನೀಡಲು ಪ್ರಾರಂಭಿಸಿದ್ದರು. ಪಶ್ಚಿಮ ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ರಾಜಸ್ಥಾನ, ದೆಹಲಿ ಸೇರಿದಂತೆ ದೇಶಾದ್ಯಂತ ಭೋಲೆ ಬಾಬಾಗೆ ಲಕ್ಷಾಂತರ ಅನುಯಾಯಿಗಳಿದ್ದಾರೆ.==ಈ ಹಿಂದೆ ಕಾಲ್ತುಳಿತಕ್ಕೆ ಬಲಿಯಾದವರು2013 ಅ.13: ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯಲ್ಲಿ ನವರಾತ್ರಿ ಆಚರಣೆ ವೇಳೆ 115 ಜನರು ಸಾವು2011 ಜ.14: ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಕಾಲ್ತುಳಿತಕ್ಕೆ 104 ಶಬರಿಮಲೆ ಭಕ್ತರು ಜನರು ಬಲಿ2010 ಮಾ.4: ಉತ್ತರ ಪ್ರದೇಶದ ಪ್ರತಾಪಗಢ ಜಾನಕಿ ರಾಮ ದೇಗುಲದಲ್ಲಿ 63 ಜನರು ಸಾವು2008 ಸೆ. 30: ರಾಜಸ್ಥಾನದ ಜೋಧಪುರದ ಚಾಮುಂಡಾ ದೇಗುಲದಲ್ಲಿ 250 ಮಂದಿ ಬಲಿ2008 ಆ.3: ಹಿಮಾಚಲ ಪ್ರದೇಶದ ನೈನಾ ದೇವಿ ದೇಗುಲದಲ್ಲಿ 162 ಜನ ಸಾವು2005 ಜ.25: ಮಹಾರಾಷ್ಟ್ರದ ಮಂದಾರದೇವಿ ದೇಗುಲದಲ್ಲಿ ಕಾಲ್ತುಳಿತಕ್ಕೆ 340 ಮಂದಿ ಸಾವು